ಹೊಸಪೇಟೆ: ತಾಲೂಕಿನ ಕಮಲಾಪುರದಲ್ಲಿ ಇತ್ತೀಚೆಗೆ ಕಳತನಕ್ಕೆ ಯತ್ನಿಸಿದ ನಗರದ ಕಾರಿಗನೂರಿನ ನಿವಾಸಿಗಳಾದ ಮಾರುತಿ (19), ಜಯಕುಮಾರ್ (23) ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ಫೆ.4ರಂದು ಮಾರುತಿ (19), ಜಯಕುಮಾರ್ (23) ಹಾಗೂ ರಮೇಶ್ (20) ಎಂಬುವರು ಭರಮಪ್ಪ ಎಂವುವರ ಕುರಿ ಹಟ್ಟಿ ಮೇಲೆ ದಾಳಿ ಮಾಡಿ ಕಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ತಡೆಯಲು ಬಂದ ಭರಮಪ್ಪಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ. ರಮೇಶ್ ಎಂಬುವರಿಗೆ ಬಲೆ ಬಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.