

ಹೊಸಪೇಟೆ: ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗಿಯ ಕಚೇರಿಯ ಬಸ್ ಡಿಪೋನಲ್ಲಿ ಅನುಮತಿಯಿಲ್ಲದೇ ಸ್ಕಾçö್ಯಫ್ ಗೋಲ್‌ಮಾಲ್ ನಡೆದಿದೆ ಎಂದು ಆರೋಪ ಕೇಳಿಬಂದಿದ್ದು, ಕೇಂದ್ರಿಯ ಕಚೇರಿಯ ಉನ್ನತ ಅಧಿಕಾರಿಗಳಿಂದ ಚುರುಕಾಗಿದೆ ತನಿಖೆ.
ಸರ್ಕಾರಿಯಾಗಲಿ, ಖಾಸಗಿ ಸಂಸ್ಥೆಯಾಗಲಿ ಯಾವುದೇ ವ್ಯಾವಹಾರ, ಕಾರ್ಯಗಳು ನಡೆಯಬೇಕು ಎಂದರೆ, ಸಂಸ್ಥೆಯ ಮುಖ್ಯಸ್ಥರ ಅನುಮತಿ ಕಡ್ಡಯ. ಆದರೆ, ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋನಲ್ಲಿ ಇಲಾಖೆಯ ಮುಖ್ಯಸ್ಥರ ಅನುಮತಿಯಿಲ್ಲದೇ ತ್ಯಾಜ್ಯ ಹೊರ ಕಳಿಸುವ ನೆಪದಲ್ಲಿ ಲಕ್ಷಗಟ್ಟಲೇ ಬೆಲೆ ಬಾಳುವ ಸ್ಕಾçö್ಯಫ್ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕೆಎಸ್‌ಆರ್‌ಟಿಸಿ ವಿಭಾಗಿಯ ಕಚೇರಿ ಹಾಗೂ ಕೇಂದ್ರ ಬಸ್‌ನಿಲ್ದಾಣ ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಳ್ಳಾರಿ ರಸ್ತೆಯಲ್ಲಿ ಬಸ್ ಡಿಪೋ ಅಂದಾಜು ಎರಡು ಕಿಮೀ ದುರದಲ್ಲಿದೆ. ಆದರೆ, ಡಿಪೋದಲ್ಲಿ ನಡೆಯುವ ಕೆಲ ಕಾರ್ಯಗಳು ನಿಗಮದ ನಿಯಂತ್ರಣಾಧಿಕಾರಿಗಳ ಗಮನಕ್ಕೆ ಬರದೇ ಕಳೆದ ನಾಲ್ಕೆöÊದು ವರ್ಷಗಳಿಂದ ಕಸ ಸಾಗಿಸುವ ಹೆಸರಿನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇತ್ತೀಚೆಗೆ ಎರಡು ದಿನದಲ್ಲಿ 7 ಲಾರಿ ಸ್ಕಾçö್ಯಫ್ ಸಾಗಿಸಲಾಗಿದೆ ಎಂದು ನಿಯಾಂತ್ರಣಾಧಿಕಾರಿ ತಿಮ್ಮರೆಡ್ಡಿ ಅವರಿಗೆ ದೂರು ನೀಡಲಾಗಿದೆ. ದೂರಿನ ಹಿನ್ನೆಲೆಯಲ್ಲಿ ನಿಯಂತ್ರಣಾಧಿಕಾರಿ ಕಲಬುರಗಿಯ ಕೇಂದ್ರ ಕಚೇರಿಗೆ ಅಕ್ರಮದ ದೂರು ನೀಡಿದ್ದಾರೆ. ಉಪಮುಖ್ಯ ಭದ್ರತಾ ಜಾಗೃತ ಅಧಿಕಾರಿ ವೀರಭದ್ರಪ್ಪ ಕುಂಬಾರಿ ಹಾಗೂ ಉಪಮುಖ್ಯ ಉಗ್ರಣ ಅಧಿಕಾರಿ ಸತೀಶ್ ಮಂಗಣ್ಣ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಸಲಾಗಿದೆ
ಗಮನಕ್ಕೆ ಬಾರದೇ ಡಿಪೋದಿಂದ ಹೊರಗಡೆ ತ್ಯಾಜ್ಯ ಕಳುಹಿಸಲಾಗಿದೆ. ಅನುಮಾನ ಬಂದು ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಎರಡು ದಿನಗಳ ಕಾಲ ಕಲಬುರಗಿಯಿಂದ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಲಾಗಿದೆ. ವರದಿ ಇನ್ನು ನೀಡಿಲ್ಲ. ತಿಮ್ಮರೆಡ್ಡಿ, ವಿಭಾಗಿಯ ನಿಯಂತ್ರಣಾಧಿಕಾರಿ, ಕಕ ರಸ್ತೆ ಸಾರಿಗೆ ನಿಗಮ, ಹೊಸಪೇಟೆ