

ಹೊಸಪೇಟೆ: ಕ್ಷಯ ಮುಕ್ತ ಭಾರತ ನಿರ್ಮಾಣದ ಗುರಿಯನ್ನು ಸಾಧಿಸಲು ಸರ್ಕಾರದ ಜತೆಗೆ ಜನಸಮಾನ್ಯರ ಸಹಕಾರ ಅಗತ್ಯವಾಗಿದೆ ಎಂದು ಕ್ಷಯರೋಗ ನಿರ್ಮೂಲನ ಘಟಕದ ಮುಖ್ಯಾಧಿಕಾರಿ ಡಾ.ಭಾಸ್ಕರ್ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಗುರುವಾರ ನಡೆದ ನಿಕ್ಷಯ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ಷಯ ಮುಕ್ತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ನಿಗದಿತ ಗುರಿ ಸಾಧಿಸಲು ಸಾಮಾನ್ಯ ಜನರ ಸಹಕಾರ ಅಗತ್ಯವಾಗಿದೆ. ಕ್ಷಯ ರೋಗದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರಿಂದ ಕ್ಷಯ ನಿರ್ಮೂಲನೆ ಸಾಧ್ಯವಾಗಿದೆ. ಕ್ಷಯ ರೋಗಿಯು ಕೆಮ್ಮಿದಾಗ, ಸೀನುವಾಗ ಕರವಸ್ತ್ರಗಳಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು. ಎಲ್ಲರೂ ಸೋಪಿನಿಂದ ಕೈಗಳನ್ನು ತೊಳೆಯಬೇಕು. ಎಲ್ಲೆಂದರಲ್ಲಿ ಕಫವನ್ನು ಉಗುಳಬಾರದು. ಗಾಳಿ, ಬೆಳಕು ಸರಾಗವಾಗಿ ಬರುವಂತೆ ಮಾಡಲು ಮನೆಗಳ ಕಿಟಕಿ, ಬಾಗಿಲುಗಳನ್ನು ತೆರದಿಡಬೇಕು. ಕ್ಷಯರೋಗ ಮೈಕ್ರೋಬ್ಯಾಕ್ಟಿರಿಯಂ ಟ್ಯುಬರ್‌ಕ್ಯುಲೋಸಿಸ್ ಎಂ ರೋಗಾಣುವಿನಿಂದ ಉಂಟಾಗುವ ಒಂದು ಸಾಂಕ್ರಮಿಕ ರೋಗ. ಎರಡು ವಾರಕ್ಕಿಂತ ಹೆಚ್ಚು ಅವಧಿಯ ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಕಫ, ಕಫದಲ್ಲಿ ರಕ್ತ, ಎದೆನೋವು, ಹಸಿವಾಗದಿರುವುದು, ತೂಕ ಇಳಿಕೆ ಕ್ಷಯರೋಗದ ಲಕ್ಷಣಗಳಾಗಿವೆ ಎಂದರು.
ಎAಸಿಎಚ್‌ನಿAದ ಆರಂಭಗೊAಡ ಜಾಥಾ ಗಾಂದಿಚೌಕು, ಪುಣ್ಯಮೂರ್ತಿ ವೃತ್ತ, ಕೇಂದ್ರ ಬಸ್‌ನಿಲ್ದಾಣ, ಪುನೀತ್‌ರಾಜಕುಮಾರ್ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಜನಜಾಗೃತಿ ಮೂಡಿಸಲಾಯಿತು.