ಕೊಟ್ಟೂರುಸ್ವಾಮಿ ಸರ್ವಧರ್ಮಗಳ ಸೇತುವೆ

Marriage
ಹೊಸಪೇಟೆ ಕೊಟ್ಟೂರುಸ್ವಾಮಿ ಮಠದದಲ್ಲಿ ಬಸವ ಜಯಂತಿ ನಿಮಿತ್ತ ಸಾಮೂಹಿಕ ಮದುವೆ ನಡೆಯಿತು.
Published on

ಹೊಸಪೇಟೆ: ಜಾತಿ, ಧರ್ಮಗಳ ಬೇಲಿಯನ್ನು ದಾಟಿ ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಿತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕಲುಷಿತಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಸಾಮರಸ್ಯದಿಂದ ಬದುಕುವುದಕ್ಕೆ ಪ್ರೇರೇಪಿಸುತ್ತವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಇಲ್ಲಿನ ಕೊಟ್ಟೂರುಸ್ವಾಮಿ ಮಠದದಲ್ಲಿ ಬಸವ ಜಯಂತಿ ನಿಮಿತ್ತ ಸಾಮೂಹಿಕ ಮದುವೆ ಹಾಗೂ ಮಕ್ಕಳಿಗೆ ಐಯ್ಯಾಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯಲ್ಲಿ ಮಡತಿ ಶಾಂತವಾಗಿದ್ದರೆ ಜೀವನದ ಬಂಡಿ ಸುಖಕರವಾಗಿರುತ್ತದೆ. ಇತ್ತೀಚಿನ ಮದುವೆಗಳು ತೋರ್ಪಡಿಕೆಗೆ ಮಾಡುತ್ತಿದಾರೆ. ಮದುವೆ ನಂತರ ಪರಸ್ಪರ ಕುಟುಂಬದವರು ತಮ್ಮ ಮನೆ ಸದಸ್ಯರಂತೆ ನೋಡಿಕೊಂಡಾಗ ಯಾವ ಗೊಂದಲಗಳು ಬರುವುದಿಲ್ಲ ಎಂದರು.

ಅರಿತುಕೊAಡರೆ ಸುಖದ ಸಂಸಾರ ನಡೆಯಲಿದೆ ಕೋಪದ ಕೈಯಲ್ಲಿ ನಾವಿರಬಾರದು, ಇಲ್ಲವೆಂದರೆ ಬಾಳು ಹಾಳು. ಮನಸ್ಥಾಪಗಳು ಇರದೇ ಒಳ್ಳೆ ಸಂಸ್ಕಾರ ನಡೆಸಿದರೆ, ಹಿರಿಯರಿಗೆ ಗೌರವ ಕೊಟ್ಟಂತೆ. ಬಡವರಿಗೆ ಅನುಕೂಲಕ್ಕಾಗಿ ಅಂತಹ ಸಾಮಾಜಿಕ ಸಾಮುಹಿಕ ಮದುವೆ ಮಾಡಲು ಮಠ ಮಾನ್ಯದ ಜತೆ ಸರ್ಕಾರ ಕೈ ಜೋಡಿಸಿವೆ. 12 ಶತಮಾನದಲ್ಲಿ ಬಸವಣ್ಣನವರೇ ಇಂತಹ ಕಾರ್ಯಗಳಿಗೆ ನಾಂದಿಯಾಗಿದ್ದರು. ಬಸವಣ್ಣನ ತತ್ವಗಳು ಪಾಲಿಸಿದರೆ ಸಮಾಜದಲ್ಲಿ ತಪ್ಪೆ ನಡೆಯಲ್ಲ ಎಂದರು.

ಕನ್ನಡ ವಿವಿಯ ಪರಮಶಿವಮೂರ್ತಿ ಮಾತನಾಡಿ, ಮಠಮಾನ್ಯಗಳು ಧಾರ್ಮಿಕ ಕಾರ್ಯ ಕ್ರಮದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುತ್ತಿವೆ. ಬಸವಾಧಿ ಶರಣರ ಹಾದಿಯಲ್ಲಿ ನಡೆಯುತ್ತಿವೆ. ಸರ್ಕಾರವನ್ನು ನಂಬಿಕೊAಡೆರೆ ಯಾವುದೇ ಕ್ಷೇತ್ರಗಳು ಅಭಿವೃದ್ಧಿ ಆಗಲ್ಲ. ಆದ್ದರಿಂದ ಮಠ ಮಾನ್ಯಗಳು ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿವೆ ಎಂದರು.

ಸಾನಿಧ್ಯ ವಹಿಸಿದ್ದ ಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ, 50 ವರ್ಷದಲ್ಲಿ ಮಠದಿಂದ 8 ಸಾವಿರಕ್ಕೂ ಅಧಿಕ ಉಚಿತ ಸಾಮುಹಿಕ ಮದುವೆಯಾಗಿದೆ. ನಿಸ್ವಾರ್ಥದಿಂದ ಇಂಥ ಸಾಮಾಜಿಕ ಕಾರ್ಯ ಗಳಲ್ಲಿ ಭಾಗಿಯಾಗಬೇಕು. ಬಸವಣ್ಣ ನವರು ಸಮಾನತೆ ಸಾರಿದ ಮಹಾ ಪುರುಷರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net