ಕಾಂಗ್ರೆಸ್ ಗೆ ಪ್ರತ್ಯೇಕ ಧರ್ಮದ ಸಂಬಂಧವಿಲ್ಲ

Published on

ಹೊಸಪೇಟೆ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿಎಂ ಆಗಲಿ, ಕಾಂಗ್ರೆಸ್ ಪಕ್ಷದ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಸಚಿವ ಈಶ್ವರ ಬಿ.ಖಂಡ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ವಿಚಾರವಾಗಿ ಈಗಾಗಲೇ ಅನಿಲ ಭಾರತ ವೀರಶೈವ ಮಹಾಸಭೆಯಿಂದ ವಿಚಾರಗಳನ್ನು ತಿರ್ಮಾನ‌ ಮಾಡಿ ಪ್ರಕಟಣೆ ಹೊರಡಿಸಲಾಗಿದೆ. ಆದ್ದಕ್ಕೆ ನಾವು ಕಟ್ಟಿಬದ್ದರಿದ್ದೇವೆ. ಕಾಂಗ್ರೆಸ್ ಗೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಆಗಲಿ, ಸಿಎಂ ಸಿದ್ದರಾಮಯ್ಯ ಆಗಲಿ ಈ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಮಾಡಿಲ್ಲ. ಧರ್ಮದ ವಿಚಾರ ಸಮಾಜ ಹಾಗೂ ಮಠಾಧೀಶರಿಗೆ ಬಿಟ್ಟ‌ಬಿಚಾರವಾಗಿದೆ. ಜೇನು ಗುಡಿಗೆ ಕೈಹಾಕಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದೆ. ನಾವೆಲ್ಲ ಸಹೋದರರಂತೆ‌ ಇದ್ದೇವೆ, ನಾವೆಲ್ಲ‌ ಕೂಡಿದ್ದೇವೆ ಎಂದರು.

ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸಂಪುಟ ಪುನರ್ ರಚನೆ ಮಾಡುವುದು ಸಿಎಂ ಹಾಗೂ ವರಿಷ್ಠರ ತಿರ್ಮಾನಕ್ಕೆ ಬಿಟ್ಟಿದ್ದು. ಸಿಎಂ ಕಾಲಕಾಲಕ್ಕೆ ಊಟ ಉಪಾಹಾರ ಕರೆಯುತ್ತಾರೆ. ಅವರು ರಾಜ್ಯದ ಬರಗಾಲ, ಪ್ರವಾಹ ಸೇರಿದಂತೆ ರಾಜ್ಯ ಅಭಿವೃದ್ಧಿ ಮಾಡುವ ಚಿಂತನೆ ನಡೆಸುತ್ತೇವೆ. ಜತೆಗೆ ಸಿಎಂ ಮಾರ್ಗದರ್ಶನವನ್ನು ಕೂಡ ನೀಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net