ತೆರಿಗೆ ಹಣ ಪಾವಾತಿಸದಿದ್ದರೆ ಕಂಪನಿ ಮುಚ್ಚಿಸಿ

27 MANJU 01
Published on

ಹೊಸಪೇಟೆ: ಮರಿಯಮ್ಮನಹಳ್ಳಿ ಸಮೀಪದ ಬಿಎಂಎA ಕಾರ್ಖಾನೆಯ 16 ಕೋಟಿ ರೂ. ತೆರಿಗೆ ಪಾವತಿ ಮಾಡದೆ, ಡಾಣಪುರ ಗ್ರಾಮ ಪಂಚಾಯಿತಿಗೆ ವಂಚನೆ ಮಾಡುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಮೂರ್ತಿ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸುಭಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಪಿಸಿದರು.

ಕಳೆದ ಎರಡು ವರ್ಷಗಳಿಂದ ಬಿಎಂಎA ಕಂಪನಿಯಿAದ ತೆರಿಗೆ ಪಾವತಿ ಆಗಿಲ್ಲ. ಈ ಸ್ಥಾನದಲ್ಲಿ ಜನಸಾಮಾನ್ಯರು ಏನಾದರೂ ಇದ್ದರೆ, ಮನೆಗಳಿಗೆ ಬಂದು ಕಿರುಕುಳ ನೀಡುತ್ತಿರಿ. ಆದರೆ, ಕಂಪನಿಯವರು ಕೋಟಿಗಟ್ಟಲೆ ತೆರಿಗೆ ಕಟ್ಟದಿದ್ದರೂ ಅಧಿಕಾರಿಗಳು ಮೌನವಹಿಸುವುದು ಅನುಮಾನವಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಸಾತ್ ನೀಡಿದ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ, ಕಂಪನಿಯವರಿಗೆ ಯಾವುದೇ ಮುಲಾರಿಲ್ಲದೆ, ಮೊದಲು ಬಾಕಿ ಇರುವ ತೆರಿಗೆ ಪಾವತಿ ಮಾಡಿಸಿಕೊಳ್ಳಿ. ಜನಪ್ರತಿನಿಧಿಗಳು ಎಂದರೆ ಕಂಪನಿಗಳಿAದ ಆಯ್ಕೆಯಾದವರಲ್ಲ ಜನರಿಂದ ಆಯ್ಕೆಯಾಗಿ ಬಂದವರು. ಮೊದಲು ಸಾರ್ವಜನಿಕರಿಗೆ ನ್ಯಾಯ ಕೊಡಿಸ ಆಗಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಜನಸಾಮಾನ್ಯರಿಗೊಂದು ಇತರರಿಗೂ ಇನ್ನೊಂದು ಇಲ್ಲಿ ಕಾನೂನು ಇಲ್ಲ. ಕಂಪನಿಯವರಿಗೆ ನಿಯಮಾನುಸಾರವಾಗಿ ಮೊದಲು ನೋಟಿಸ್ ಜಾರಿ ಮಾಡಿ ಇಲ್ಲವೆಂದರೆ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದರು.

ವಿವಿಧ ಇಲಾಖೆಗಳ ಕುಂದು ಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು. ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಶಾಸಕರಾದ ಎಚ್.ಆರ್.ಗವಿಯಪ್ಪ, ನೇಮರಾಜ್ ನಾಯ್ಕ, ಕೃಷ್ಣ ನಾಯ್ಕ, ಎಂ.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ದೇವೇಂದ್ರಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಎಎಸ್ಪಿ ಸಲೀಂ ಪಾಷಾ ಇತರರಿದ್ದರು.

ರೋಗಿಗಳಿಗೆ ಸಮಸ್ಯೆಯಾಗದಿರಲಿ

ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ,ಸಿಬ್ಬಂದಿಗಳ ಕೊರತೆ ಹಾಗೂ ಇತರೆ ಕಾರಣಗಳಿಂದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಗಾಗ ದೂರುಗಳು ಬರುತ್ತಿವೆ. ಇದಕ್ಕೆ ಆರೋಗ್ಯ ಇಲಾಖೆಯವರು ಸ್ಪಂದಿಸದಿದ್ದರೆ ನಾವು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಡಿಎಚ್‌ಒ ಶಂಕರ್ ನಾಯ್ಕ ಎಚ್ಚರಿಕೆ ನೀಡಿದರು. ಇದಕ್ಕೆ ಉತ್ತರ ನೀಡಿದ ಡಿಎಎಚ್‌ಒ ಶಂಕರ್ ನಾಯ್ಕ, ನಮ್ಮಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲವು ಸಮಸ್ಯೆಗಳಾಗುತ್ತಿವೆ. ಜಿಲ್ಲಾ ಕೇಂದ್ರವಾಗಿರುವುದರಿAದ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿವೆ, ಆದ್ದರಿಂದ ನಿರ್ವಹಣೆಯಲ್ಲಿ ಸಮಸ್ಯೆಯಾಗಿದೆ. ಜಿಲ್ಲಾ ಆಸ್ಪತ್ರೆ ಆರಂಭವಾದ ನಂತರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಜಮೀರ್ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಒಂದು ಪ್ರಸ್ತಾವನೆ ಸಾಮಾನ್ಯ ಮನವಿಯಂತೆ ಕಳಿಸಬೇಡಿ. ವಿಶೇಷವಾಗಿ ಪ್ರಸ್ತಾವನೆ ಕಳಿಸಿ ಸರ್ಕಾರದಲ್ಲಿ ಅನುಮೋದನೆ ಕೊಡಿಸುವೆ ಎಂದರು.

ಹಾವೇರಿ ಶ್ರೀಲಂಕಾ ಅಲ್ಲ

ಹೂವಿನಹÀಡಗಲಿ ಭಾಗದಲ್ಲಿ ಮರಳು ದಂಧೆ ಹೆಚ್ಚುತ್ತಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿವೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು ಇದಕ್ಕೆ ಉತ್ತರ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಇಲ್ಲಿಯವರೆಗೆ 196 ಪ್ರಕರಣಗಳು ದಾಖಲಿಸಿ 60 ಲಕ್ಷ ದಂಡಗಳನ್ನು ಹಾಕಲಾಗಿದೆ. ಅಲ್ಲಿ ಮರಳು ಧಂದೆ ಮಾಡುವವರು ಹಾವೇರಿ ಜಿಲ್ಲೆಯಿಂದ ತೆಪ್ಪದಲ್ಲಿ ಬರುತ್ತಾರೆ ಎನ್ನುತ್ತಿದ್ದಂತೆ, ಸಚಿವ ಜಮೀರ್, ಹಾವೇರಿ ಶ್ರೀಲಂಕಾ ಅಲ್ಲ ಅದು ಕೂಡ ಕರ್ನಾಟಕ. ಅಕ್ರಮ ಮರಳುಗಾರಿಕೆ ತಡೆಗಟ್ಟಲು ನಿಮಗೇನು ಬೇಕಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ತೆಪ್ಪದಲ್ಲಿ ಬಂದು ನೀರಿನಲ್ಲಿ ಮರಳುಗಾರಿಕೆ ಮಾಡುತ್ತಾರೆ. ಅಧಿಕಾರಿಗಳು ನೀರಿನಲ್ಲಿ ದಾಳಿ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂದ ಅವರು ತಪ್ಪಿಸಿ ಹೋಗಲು ಸಹಕಾರಿಯಾಗುತ್ತಿದೆ. ಕೊಪ್ಪಳ, ಹಾವೇರಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿರುವೆ ಮರಳುಗಾರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇದಕ್ಕೆ ಉತ್ತರ ನೀಡಿದ ಸಚಿವ ಜಮೀರ್, ಮೂರು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ನೀಡಲಾಗುತ್ತದೆ ಎಂದರು.

ಫಲಿತಾಂಶ ಹೆಚ್ಚಿಸಲು ಶ್ರಮವಹಿಸಿ

ಕಳೆದ ಬಾರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಕಳಪೆ ಮಟ್ಟವಾಗಿದೆ ಆದ್ದರಿಂದ ಶಿಕ್ಷಣ ಇಲಾಖೆ ವಿಶೇಷ ಯೋಜನೆ ರೂಪಿಸಿ ಫಲಿತಾಂಶ ಹೆಚ್ಚಿಸಲು ಶ್ರಮ ಪಡಬೇಕಿದೆ ಎಂದು ಸಚಿವ ಜಮೀರ್ ಶಿಕ್ಷಣ ಇಲಾಖೆ ಡಿಡಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಯ ಎಂ.ಎಸ್.ದಿವಾಕರ, ಶಾಲೆಗಳಲ್ಲಿ ವಿಶೇಷ ತರಗತಿಗಳು ಹಮ್ಮಿಕೊಳ್ಳಲಾಗಿದೆ ಪೋಷಕರಿಗೆ ಮನೆಯಲ್ಲಿ ಓದಿಸಲು ಬೆಳಗ್ಗೆ ಐದು ಗಂಟೆಗೆ ಫೋನ್ ಕರೆಗಳ ಮಾಡಲಾಗುತ್ತದೆ. ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳ ಕಡೆ ಗಮನ ಹರಿಸಲಾಗಿದೆ. ಶಾಲೆಗೆ ಗೈರಾಗಿರುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದಿರಲು ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net