ನರೇಗದಿಂದ ವಲಸೆ ಹೋಗದಂತೆ ತಡೆಯಿರಿ

05 MANJU 05 (1)
Published on

ಹೊಸಪೇಟೆ: ನರೇಗ ಕಾಯ್ದೆ ಇದು ಜನರ ಹಕ್ಕಿನ ಸಾಕಾರಕ್ಕೆ ಜಾರಿಯಾಗಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರಿಗೆ ಜಾಗೃತಿ ಮೂಡಿಸುವಂತದು ಕಾಯಕ ಮಿತ್ರುಗಳ ಕೆಲಸವಾಗಬೇಕು ಎಂದು ಜಿ.ಪಂ. ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಹೇಳಿದರು.

ನಾಗರೀಕ ಸಮಾಜದ ಒಳ ಒಕ್ಕೂಟದಿಂದ ಇಲ್ಲಿನ ತಾಪಂ ವಿದ್ಯಾರಣ್ಯ ಸಭಾಗಂಣದಲ್ಲಿ ಮಂಗಳವಾರ ಕಾಯಕ ಬಂಧುಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಪಂಚಾಯತಿಯಲ್ಲಿ ಉದ್ಯೋಗ ಖಾತರಿ ಕೆಲಸ ಜನರಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೆಲಸ ಸಿಗುವಂತೆ ಗ್ರಾ.ಪಂ. ಅಧಿಕಾರಿಗಳು ಕ್ರಮ ವಹಿಸಬೇಕು.

ಜನರು ಕೆಲಸಕ್ಕಾಗಿ ಅಲೆಯದಂತೆ ವಲಸೆ ಹೋಗದಂತೆ ನಿರುದ್ಯೋಗ ಸೃಷ್ಟಿಯಾಗದಂತೆ ತಡೆಯಲು ನರೇಗ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ನರೇಗ ಏಕೆ ಮುಖ್ಯ ಎನ್ನುವುದನ್ನು ಐದು ಜಿಲ್ಲೆಗಳು ಸಂಪೂರ್ಣವಾಗಿ 100 ದಿನಗಳ ಉದ್ಯೋಗ ಖಾತರಿ ಕೆಲಸವನ್ನು ಮಾಡಿ ತಮ್ಮ ನಿರುದ್ಯೋಗ ಸಮಸ್ಯೆಗಳನ್ನು ನಿಗಿಸಿಕೊಂಡು ಜೀವನವನ್ನು ಸಾಗಿಸಲು ಸಾಕ್ಷಿಯಾಗಿದೆ ಎಂದರು.

ರಾಜ್ಯಮಟ್ಟದ ಸಮಿತಿ ಸದಸ್ಯ ಸುರೇಶ ಎಸ್.ಗೌಡ, ಸಖೀ ಟ್ರಸ್ಟ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮಿ, ಪ್ರಮುಖರಾದ ಅಶೋಕ್ ಯರಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net