

ಹೊಸಪೇಟೆ: ವಾಲ್ಮೀಕಿ ಸಮುದಾಯದ ಬಗ್ಗೆ ಅವಮಾನಿಸಿದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ವಾಲ್ಮೀಕಿ ನಾಯಕ ಸಂಘದಿAದ ನಗರದ ವಾಲ್ಮೀಕಿ ವೃತ್ತದಿಂದ ಎಸ್ಪಿ ಕಚೇರಿವರೆಗೆ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಎಸ್ಪಿ ಎಸ್.ಜಾಹ್ನವಿ ಅವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ತನ್ನ ಬೆಂಬಲಿಗರೊAದಿಗೆ ಮಾತಾಡುವಾಗ ಸಾರ್ವಜನಿಕವಾಗಿ ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಜ್ಯದ ವಾಲ್ಮೀಕಿ ಸಮುದಾಯದ ಜನರ ಮನಸ್ಸಿಗೆ ನೋವಾಗಿದೆ. ಅಪಮಾನ ಮಾಡಿ ತಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಇದರಿಂದ ಪರಿಣಾಮ ರಾಜ್ಯದಲ್ಲಿ ಪರಿಶಿಷ್ಟ ಹಾಗೂ ಮೆಲುವರ್ಗದ ಜನರ ನಡುವೆ ಘರ್ಷಣೆ ಉಂಟಾಗುವ ಸಂದರ್ಭ ಸೃಷ್ಟಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಅವಹೇಳನಕಾರಿ ಮಾತಾಡಿ ಅವಮಾನ ಕೆಲಸ ಮಾಡುತ್ತಿದ್ದು, ಇದರಿಂದ ಸಮಾಜದಲ್ಲಿ ಮೇಲು ಕೀಳು ಭಾವನಗಳನ್ನು ಸೃಷ್ಟಿಸುವ ಜತೆಗೆ ದೇಶದ ಸಂವಿಧಾನವನ್ನು ಅವಮಾನ ಮಾಡಿದಂತಾಗಿದೆ. ಹಾಗಾಗಿ ದಲಿತ ಸಮುದಾಯಕ್ಕೆ ಜಾತಿ ನಿಂದನೆ ಮಾಡಿರುವ ಅವರ ವಿರುದ್ಧ ಕೂಡಲೇ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್.ಜಂಬಯ್ಯನಾಯಕ, ಪ್ರಮುಖರಾದ ಗುಡಿಗುಡಿ ಸೋಮನಾಥ, ಬೆಳಗೋಡು ಅಂಬಣ್ಣ, ಗುಜ್ಜಲ ಶ್ರೀನಾಥ, ಕಣ್ಣಿ ಶ್ರೀಕಂಠ, ಸಿಂದಿಗೇರಿ ದೇವೇಂದ್ರಪ್ಪ, ತಾರಿಹಳ್ಳಿ ವೆಂಕಟೇಶ್, ನರ‍್ಲೀಗಿ ಕರೆಹನುಮಂತ, ದುರುಗಪ್ಪ ಪೂಜಾರಿ, ಟಿ.ನಾಗರಾಜ, ಕಟಿಗಿ ರಾಮಕೃಷ್ಣ ಸೇರಿ ಇತರರಿದ್ದರು.