ಮೃತರಿಗೆ ಒಂದು ಕೋಟಿ ರೂ ಪರಿಹಾರ ನೀಡಲಿ

25 HPT7
Published on

ಹೊಸಪೇಟೆ: ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಬೀಕರ ಭಯೋತ್ಪಾದಕ ದಾಳಿಯಲ್ಲಿ ಖಂಡಿಸಿ ಹಾಗೂ ಮೃತರಿಗೆ ಶ್ರದ್ಧಾಂಜಲಿ ನಮನಗಳು ಸಲ್ಲಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಾಗರೀಕರನ್ನು ಹತ್ಯೆ ಮಾಡಿದ್ದು ಖಂಡನೀಯ, ಕೇಂದ್ರ ಸರ್ಕಾರದ ಅತಿ ಶೀಘ್ರದಲ್ಲೇ ಹಂತಕ ಉಗ್ರರನ್ನು ಹಿಡಿದು ಕಠಿಣವಾದ ಶಿಕ್ಷೆ ಕೊಡಬೇಕು. ದೇಶದಲ್ಲಿನ ಅಮಾಯಕ ಜನರನ್ನು ಗುರಿಯಾಗಿಸಿ ಕೊಂದದ್ದನ್ನು ನೋಡಿ ದೇಶದ ಜನರು ಭಯದ ವಾತಾವರಣದಲ್ಲಿ ಇದ್ದಾರೆ, ಕೇಂದ್ರ ಸರ್ಕಾರದ ದೇಶದ ಗಡಿ ಭಾಗದಲ್ಲಿ ನಾಗರೀಕರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ, ಇನ್ನೂಂದು ಸಲ ದೇಶದ ಯಾವುದೇ ಭಾಗದಲ್ಲಿ ಇಂತಹ ಕೃತ್ಯ ನಡೆಯದಂತೆ ಎಚ್ಚರಿಕೆಯಿಂದ ಇರಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ಮಾತನಾಡಿ, ದೇಶಾದ್ಯಂತ ಎಐಸಿಸಿಯಿಂದ ದೇಶದ ಜಿಲ್ಲಾ ಕೇಂದ್ರಗಳಲ್ಲಿ ಉಗ್ರರ ದಾಳಿಯನ್ನು ಖಂಡಿಸಿ, ಕ್ಯಾಂಡಲ್ ಮೇರವಣಿಗೆ ಹಾಗೂ ಮೃತ ನಾಗರೀಕರಿಗೆ ಸಂತಾಪ ಸೂಚನೆ ಮತ್ತು ಶ್ರದ್ಧಾಂಜಲಿ ನಮನಗಳು ಸಲ್ಲಿಸಲಾಗುತ್ತಿದೆ. ಉಗ್ರರ ದಾಳಿಯಿಂದಾಗಿ ಮೃತ ನಾಗರೀಕರಿಗೆ ರಾಜ್ಯ ರಾಜ್ಯ ಸರ್ಕಾರ ಸರ್ಕಾರದಿಂದ ಮೃತ ಪಟ್ಟ ರಾಜ್ಯದ ಜನರಿಗೆ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಈಗ ಸರ್ಕಾರ ಕೇಂದ್ರ ಸರ್ಕಾರದ ಮೃತ ನಾಗರೀಕರಿಗೆ ಪ್ರತಿಯೊಬ್ಬರಿಗೂ ತಲಾ ಒಂದು ಕೋಟಿ ರೂ. ಮತ್ತು ಮೃತ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಹುಡಾ ಅಧ್ಯಕ್ಷ ಎಚ್.ಎನ್.ಮೋಹಮ್ಮದ ಇಮಾಮ್ ನಿಯಾಜಿ, ಪ್ರಮುಖರಾದ ಕೆ.ರಮೇಶ, ಕೆ.ಎಸ್.ದಾದಪೀರ, ವಿನಾಯಕ ಶೆಟ್ಟರ್, ಬಿ.ಮಾರೆಣ್ಣ, ಸಣ್ಣ ಈರಪ್ಪ, ಬಿ.ನಾರಾಯಣ, ದಾದಾ ಖಲಂದರ್, ಶೇಖ್ ತಾಜುದ್ದೀನ್, ಕೆ.ಇಮ್ತಿಯಾಜ್, ಸಿ.ಆರ್.ಭರತ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net