

ಹೊಸಪೇಟೆ: ಕಾಸರಗೋಡು ಕನ್ನಡ, ತುಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಹಾಗೂ ಸಂಸ್ಕöÈತಿಗಳ ಸಂಗಮವಾಗಿದೆAದು ಕಾಸರಗೋಡಿನ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಕೆ.ಮಹಮ್ಮದಾಲಿ ಹೇಳಿದರು.
ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗ, ನಾಟಕ ವಿಭಾಗ, ಆಂತರಿಕ ಭರವಸೆ ಕೋಶ ಹಾಗೂ ಕಾಸರಗೋಡಿನ ಗೋವಿಂದ ಪೈ ಸ್ಮಾರಕ ಕಾಲೇಜು ಮಂಜೇಶ್ವರ ಗೋವಿಂದ ಸಹಯೋಗದಲ್ಲಿ ಸಾಂಸ್ಕೃತಿಕ ವಿನಿಮಯ ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
1956ರ ಮೊದಲೂ ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಜಿಲ್ಲೆ ನಂತರ ಕೇರಳದ ರಾಜ್ಯಕ್ಕೆ ಸೇರಿತು. ಹೀಗೆ ಭಾಗವಾದ ಪ್ರದೇಶದಲ್ಲಿ ಕಲೆ ಸಂಸ್ಕöÈತಿಯನ್ನು ಉಳಿಸಿ ಬೆಳೆಸಿಕೊಂಡು ಸುಮಾರು ಏಳಕ್ಕಿಂತ ಹೆಚ್ಚು ಭಾಷೆಯನ್ನು ದಿನನಿತ್ಯ ಮಾತನಾಡುತ್ತಾರೆ. ಈ ನಿಟ್ಟಿನಲ್ಲಿ ಗೋವಿಂದ ಪೈ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕವು ವಿಭಿನ್ನ ಸಂಸ್ಕöÈತಿಗಳನ್ನು ಸಹಬಾಳ್ವೆಯಿಂದ ನಡೆಸಿಕೊಂಡು, ರಾಷ್ಟೀಯ ಭಾವೈಕ್ಯತೆಯನ್ನು ಮೂಡಿಸುವ ಹಾಗೂ ವಿವಿಧ ಸಂಸ್ಕöÈತಿ ಮತ್ತು ಕಲೆಯನ್ನು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ಕುಲಸಚಿವ ಡಾ.ವಿಜಯ ಪೂಣಚ್ಚ ತಂಬAಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಕಲೆ, ಸಂಸ್ಕöÈತಿ ಹಾಗೂ ಸಂಗೀತವನ್ನು ಜಗತ್ತಿನಾದ್ಯಂತ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇನ್ನೂ ಕಾಸರಗೋಡು ಜಿಲ್ಲೆಯಲ್ಲಿ ಗೋವಿಂದ ಪೈ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕನ್ನಡ ಸರಳವಾಗಿ ಮಾತನಾಡುತ್ತಿದ್ದಾರೆ. ಹೀಗೆ ಕನ್ನಡವನ್ನು ಇನ್ನೂ ಹೆಚ್ಚು ಜನರು ಕಲಿತು ಇದರಲ್ಲಿನ ಸೂಕ್ಷö್ಮತೆಯ ವಿಚಾರಗಳನ್ನು ತಿಳಿಯಬೇಕು ಎಂದರು.
ಲಲಿತಕಲಾ ನಿಕಾಯದ ಡೀನ್ ಡಾ.ಶಿವಾನಂದ ವಿರಕ್ತಮಠ, ಸಂಗೀತ ಮತ್ತು ನೃತ್ಯ ವಿಭಾಗ ಮುಖ್ಯಸ್ಥ ವೀರೇಶ ಬಡಿಗೇರ, ಪ್ರಾದ್ಯಾಪಕರಾದ ಪ್ರೊ.ಎ.ಶ್ರೀಧರ, ಡಾ.ಡಿ.ಮೀನಾಕ್ಷಿ, ಶಕುಂತಲ ಚೌಡನಾಯ್ಕ ಇತರರಿದ್ದರು.