

ಹೊಸಪೇಟೆ: ಕಾರ್ತಿಕ ಸೋಮವಾರ ಹಿನ್ನೆಲೆ ದಕ್ಷಿಣ ಕಾಶಿ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭಕ್ತರ ಭೇಟಿ ನೀಡಿ ದೀಪ ಬೆಳಗಿ ದೇವರ ದರ್ಶನ ಪಡೆದರು.
ವಿಕೇಂಡ್ ಹಾಗೂ ಕನಕದಾಸ ಜಯಂತಿ ರಜ ಹಿನ್ನೆಲೆಯಲ್ಲೂ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬಂದಿತು. ಭಾನುವಾರ ವೀಕೆಂಡ್‌ಗಾಗಿ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸಿದ್ದರು. ಸೋಮವಾರ ಕೂಡ ಭಕ್ತು ಹಾಗೂ ಪ್ರವಾಸಿಗರು 20 ಸಾವಿರ ಕ್ಕೂ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡಿದರು.
ಹಂಪಿಗೆ ದೇಶ, ವಿದೇಶಿ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿರುವುರಿಂದ ಹಂಪಿ ಪ್ರದೇಶದಲ್ಲಿ ಪ್ರವಾಸೋದ್ಯಮ ನೆಚ್ಚಿಕೊಂಡಿರುವವರಿಗೂ ಅನುಕೂಲವಾಗುತ್ತಿದೆ. ವಿಜಯ ವಿಠಲ ದೇವಾಲಯದ ಕಲ್ಲಿನತೇರು, ಕಮಲ ಮಹಲ್, ಮಹಾನವಮಿ ದಿಬ್ಬ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು. ಇನ್ನೂ ಹಂಪಿಯಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನು ಕೂಡ ಪ್ರವಾಸಿಗರು ಕಣ್ಣತುಂಬಿಕೊAಡರು.