

ಹೊಸಪೇಟೆ: ಕಾಂತರಾಜ್ ಆಯೋಗದ ವರದಿ ಹಾಗೂ ಹಿಂದುಳಿದ ಜಾತಿಗಳಿಗೆ ವೈಜ್ಞಾನಿಕ ಮೀಸಲಾತಿ ಜಾರಿಯಾಗಲಿ ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಕಾರ್ತಿಕ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ಉದ್ಯೋಗ ಶೈಕ್ಷಣಿಕ ಮೀಸಲಾತಿ ವ್ಯವಸ್ಥೆ 3 ದಶಕಗಳ ಹಿಂದೆ ಜಾರಿಗೆ ಬಂದ ನ್ಯಾ.ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನಂತೆ ಜಾರಿಯಲ್ಲಿದೆ. ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿಯಾಗಿ ಹೊಸದಾಗಿ ಮೀಸಲಾತಿ ಪರಿಷ್ಕರಣೆಯಾಗಬೇಕು ಎಂದು ಸುಪ್ರೀಂ ಕೋರ್ಟ್ನ ತೀರ್ಪು ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ನ್ಯಾ.ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೆ ತರಬೇಕಾಗುತ್ತದೆ ಎಂದರು.
ಆಯೋಗವು ಕೇವಲ ಹಿಂದುಳಿದ ವರ್ಗಗಳ ಜಾತಿ ಗಣತಿ ಮಾಡದೆ, ರಾಜ್ಯದ ಸಮಸ್ತ ಏಳು ಕೋಟಿ ವಿವಿಧ ಸಮುದಾಯಗಳ ಸ್ಥಿತಿಗತಿಗಳ ದತ್ತಾಂಶ ಸಂಗ್ರಹಿಸಿದೆ. ಆಯೋಗವು ಸ್ವತಂತ್ರವಾಗಿ ಹಾಗೂ ನಿಸ್ಪಕ್ಷಪಾತವಾಗಿ ಎಲ್ಲಾ ಜಾತಿಗಳ ಸ್ಥಿತಿಗತಿಗಳ ವಸ್ತುನಿಷ್ಠ ಮಾಹಿತಿ ಸಂಗ್ರಹಿಸಿರುವುದರಿAದ ವರದಿ ಬಿಡುಗಡೆಗೆ ಮುನ್ನವೇ ವರದಿಯ ವಿರುದ್ದ ಅಪಸ್ವರ ಎತ್ತುವುದು ಸರಿಯಲ್ಲ ಎಂದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿಶಂಕರ್ ದೇವರಮನಿ, ಪ್ರಮುಖರಾದ ಎ.ಪಂಪಣ್ಣ, ವೈ.ಮಧುಸೂದನ, ಬಿ.ವಿರುಪಾಕ್ಷಪ್ಪ, ಐಲಿಸಿದ್ದಣ್ಣ, ಎಂ.ಶAಕ್ರಪ್ಪ, ರಾಮಾಲಿ, ಯು.ಅಶ್ವಥಪ್ಪ, ಭೀಮಣ್ಣ, ರಾಮಲಿಂಗಪ್ಪ, ಕೆ.ರಾಮಕೃಷ್ಣ, ಗೋಪಿನಾಥ, ಯು.ನೀಲಕಂಠ, ಶ್ರೀನಿವಾಸ್ ಇತರರಿದ್ದರು.