ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ

31 MANJU 01
Published on

ಹೊಸಪೇಟೆ: ರಾಜ್ಯ ಸರ್ಕಾರ ಘೋಷಣೆ ಮಾಡಿದ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸಿದ ಕನ್ನಯ್ಯ ನಾಯ್ಡುಗೆ ಹೊರದೇಶ, ಹೊರನಾಡು ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

ಕನ್ನಯ್ಯ ನಾಯ್ಡು ಅವರು ಕರ್ನಾಟಕದವರು ಅಲ್ಲದಿದ್ದರೂ, ಸಹ ಹೊರದೇಶ, ಹೊರನಾಡು ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ.10ರ ರಾತ್ರಿ ತುಂಗಭದ್ರಾ ಜಲಾಶಯದ ಗೇಟ್ ಕೊಚ್ಚಿ ಹೋಗಿತ್ತು. ಡ್ಯಾಮ್ ಗೇಟ್ ನಿರ್ಮಾಣ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಭೇಟಿ ಮಾಡಲಾಯಿತು. ನಾಯ್ಡು ಅವರ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಕ್ಷಿಪ್ರವಾಗಿ ಮುಗಿಸಿತ್ತು. ಕೊಚ್ಚಿಹೋಗಿದ್ದ ಸ್ಪಿಲ್‌ವೇ ಗೇಟ್ ನಂ.19ರ ಬದಲಿಗೆ ಐದು ಸ್ಟಾಪ್‌ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಯ್ತು. ಈ ಮೂಲಕ ತ್ರಿವಳಿ ರಾಜ್ಯಗಳ ರೈತರಿಗೆ ಭಗೀರಥನಾದನು.

ಯಾರೂ ಈ ಕನ್ನಯ್ಯ ನಾಯ್ಡು?

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಪೂರ್ಣ ಹೆಸರು ನಾಗಿಂಡಯ್ಯ ಕನ್ನಯ್ಯ ನಾಯ್ಡು. ಇವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಾಲ ಮಂಡಲ್‌ನ ದಾಸನಪಲ್ಲಿ ಗ್ರಾಮದಲ್ಲಿ 1947 ಆ.27 ರಂದು ಜನಿಸಿದ್ದಾರೆ. ಇವರು ಕುಟುಂಬ ಮೂಲತಃ ಕೃಷಿ ಕುಟುಂಬವಾಗಿತ್ತು. ಬಡತನದಲ್ಲೇ ಓದು ಮುಂದುವರೆಸಿದ ಇವರು ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಕಾಲೇಜಿಗೆ ಸೇರಿಕೊಂಡರು. ತಿರುಪತಿಯಲ್ಲಿನ ವೆಂಕಟೇಶ್ವರ ಇಂಜಿನಿಯರಿAಗ್ ಕಾಲೇಜಿನಲ್ಲಿ ತಮ್ಮ ಮೆಕ್ಯಾನಿಕಲ್ ಇಂಜಿನಿಯರಿAಗ್ ಅನ್ನು ಕಂಪ್ಲೀಟ್ ಮಾಡಿದರು. ಆಗಿನ ಕಾಲದಲ್ಲೇ ಇಂಜಿನಿಯರಿAಗ್ ಮುಗಿಸಿದ್ದರೂ ಸಹ ಇವರಿಗೆ ಉದ್ಯೋಗ ಸಿಗಲಿಲ್ಲ. ಕಾರಣ ಇವರು ಬೆಲೆಟೇರಿಯಲ್ ಪ್ರದೇಶದಲ್ಲಿ ಇದ್ದಿದ್ದರಿಂದ ಇವರಿಗೆ ಆಗಿನ ಸರ್ಕಾರಗಳು ಕೆಲಸ ಕೊಡಲಿಲ್ಲ. ದಿವಾನ್ ಸಿ.ರಂಗಚಾರಿ ಅವರು ತಿರುವಂಗಳರ್ ಜತೆ ಕೆಲಸ ಮಾಡಿದ್ದಾರೆ. ಈಗಿರುವ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಸಿ.ರಂಗಚಾರಿ ಹೆಸರು ಕೂಡ ಇದೆ. ಇವರ ಬಳಿ 5 ವರ್ಷ ತರಬೇತಿ ಪಡೆದಿದ್ದರು. ಈ ತರಬೇತಿ ಪಡೆಯುವ ವೇಳೆಯೇ ನೀವು ರೈತರಿಗೆ ಸಹಾಯ ಮಾಡಬೇಕೆಂದರೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್ನಲ್ಲಿ ಕೆಲಸ ಪಡೆಯಬೇಕು. ರಾಷ್ಟ್ರಾದ್ಯಾಂತ ನೀವು ಕೆಲಸ ಮಾಡಬಹುದು ಎಂದು ಸಿ.ರಂಗಚಾರಿ ಹೇಳಿದ್ದರು. ಅದರಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡುಗೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್ನಿಂದ ಇಂಟರ್‌ವ್ಯೂವ್‌ಗೆ ಕರೆ ಬಂತು. ಆ ಸಂದರ್ಶನದಲ್ಲಿ ಕನ್ನಯ್ಯ ನಾಯ್ಡು ಆಯ್ಕೆಯಾಗಿದ್ದರು.

ಮುಂದೆ 1976 ಜ.16ರಂದು ತುಂಗಭದ್ರಾ ಪ್ರಾಜೆಕ್ಟ್ಗೆ ಕೆಲಸ ಮಾಡಲು ಬಂದರು. ಅಂದಿನಿAದ ಇಂಜಿನಿಯರಿAಗ್ ಕೆಲಸ ಮಾಡಿ 2002 ಮಾರ್ಚ್ವರೆಗೆ ಸ್ವಯಂ ನಿವೃತ್ತಿ ತೆಗೆದುಕೊಂಡರು. 2005ರ ವರೆಗೆ ನಗರದಲ್ಲೇ ಇದ್ದರು. ಡ್ಯಾಂಗೆ ಬೇಕಾಗಿದ್ದ ಕ್ರಸ್ಟ್ ಗೇಟ್, ಪವರ್ ಜನರೇಷನ್ ಗೇಟ್, ರೈತರಿಗೆ ಬೇಕಾಗಿದ್ದ ರೆಗುಲೇಟರ್ಸ್ ಎಲ್ಲವನ್ನು ಕನ್ನಯ್ಯ ಅವರೇ ಮಾಡಿದರು. ಡ್ಯಾಂ ತಜ್ಞ ಕನ್ನಯ್ಯ ಅವರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ಕೆಲ ವರ್ಷ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರ ಜೀವನದ ಅತಿ ಹೆಚ್ಚು ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದು ಅವರಿಗೆ ಈಗಲೂ ಹೆಮ್ಮೆ ಇದೆ ಎಂದು ಹೇಳಿಕೊಳ್ಳುತ್ತಾರೆ.

ದೇಶದ ಯಾವುದೇ ಮೂಲೆಯಲ್ಲೂ ಡ್ಯಾಮ್‌ಗಳ ಸಮಸ್ಯೆ ಬಂದರೆ ಸಾಕು ನನ್ನ ಸೇವೆ ಸಿದ್ದ. ಜನ್ನ ಜೀವನದ ಅರ್ದದಷ್ಟು ಬಾಗ ಕರ್ನಾಟಕದಲ್ಲೇ ಕಳೆದಿರುವೆ. ರಾಜ್ಯ ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಿದ್ದರೆ ಧನ್ಯವಾದಗಳು. - ಕನ್ನಯ್ಯ ನಾಯ್ಡು, ಡ್ಯಾಮ್ ಗೇಟ್ ನಿರ್ಮಾಣ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net