ವಿಜಯನಗರ ಆಧ್ಯಾತ್ಮಿಕ ತವರೂರು

18 MANJU 01
Published on

ಹೊಸಪೇಟೆ: ದಾಸ ಶ್ರೇಷ್ಠ ಕನಕದಾಸರು ಸಮ ಪಾಲು, ಸಮ ಬಾಳು ಎಂಬ ನೀತಿಯನ್ನು ಜಗತ್ತಿಗೆ ಸಾರಿದವರು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಸೋಮವಾರ ನಡೆದ ಕನಕದಾಸರ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನಕದಾಸರು. ಬಾಗೇನಹಳ್ಳಿಯಲ್ಲಿ ತಿಮ್ಮಪ್ಪನಾಗಿದ್ದ ಅವರು ವಿಜಯನಗರದಲ್ಲಿ ಪುರಂದರದಾಸರ ಕೃಪೆಗೆ ಪಾತ್ರರಾಗಿ ಕನಕದಾಸರಾಗಿದ್ದಾರೆ. ಅವರು ಸಂತನಾಗಿ ಸಾಹಿತ್ಯಗಳನ್ನು, ದಾರ್ಶನಿಕ ಕಾವ್ಯಗಳನ್ನು ರೂಪಿಸಿಸುತ್ತಾ, ಅದರ ಜತೆಗೆ 78 ಗ್ರಾಮಗಳನ್ನು ಆಡಳಿತ ಮಾಡುತ್ತಿದ್ದರು. ಇದರಿಂದ ಅಂದಿನ ಅರಸರಿಗೂ ಅಚ್ಚುಮೆಚ್ಚು ಎಂದರು.

ಕನಕದಾಸರು ಭಕ್ತಿಯ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರಿದರು. ಅವರ ಚಿಂತನೆಗಳು ದೇಶದ ಸಂವಿಧಾನದಲ್ಲಿ ಕೂಡ ಇದೆ. ಅವರ ತತ್ವಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು, ಕನಕದಾಸರ ಸಾಹಿತ್ಯಗಳನ್ನು ಓದುತ್ತಾ ಆಧ್ಯಾತ್ಮ ಚಿಂತನೆಗಳು ಬೆಳೆಸಿಕೊಳ್ಳಬೇಕು ಎಂದರು.

ಎಸ್ಪಿ ಬಿ.ಎಲ್.ಶ್ರೀಹರಿ ಬಾಬು ಮಾತನಾಡಿ, ಕನಕದಾಸರು ರಾಜ್ಯ ಪ್ರಸಿದ್ಧ ಸಂತ, ಕವಿ, ಮತ್ತು ದಾರ್ಶನಿಕರು. ಅವರ ಜೀವನ ಮತ್ತು ಸಾಹಿತ್ಯವು ನಮ್ಮ ಜೀವನಕ್ಕೆ ಅತ್ಯಂತ ಪ್ರೇರಣಾದಾಯಕವಾಗಿದೆ. ತಮ್ಮ ಕಾವ್ಯಗಳಲ್ಲಿ ಮಾನವತೆ, ಧರ್ಮ, ನ್ಯಾಯ, ಮತ್ತು ಶ್ರದ್ಧೆಗಳನ್ನು ಪ್ರೋತ್ಸಾಹಿಸಿದ್ದಾರೆ. ಇವರ ಆದರ್ಶ ಮಾತುಗಳು ನಮ್ಮ ಜೀವನವನ್ನು ಮಾರ್ಗದರ್ಶನ ಮಾಡುತ್ತವೆ. ಕನಕದಾಸರು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ಕನ್ನಡದಲ್ಲಿ ಕೀರ್ತನೆಗಳು, ಸಾಹಿತ್ಯಗಳು ಹಾಗೂ ದಾರ್ಶನಿಕ ಕಾವ್ಯಗಳು ರೂಪಿಸಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪ ವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಜಿ.ಪಂ. ಭೀಮಪ್ಪ ಲಾಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತಹಸೀಲ್ದಾರ್ ಶೃತಿ ಎಂ.ಮಲ್ಳನಗೌಡ್ರ್, ಪೌರಾಯುಕ್ತ ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ, ಪ್ರಮುಖರಾದ ಭರಮನಗೌಡ, ಅಯ್ಯಾಳಿ ತಿಮ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net