

ಹೊಸಪೇಟೆ: ತಾಲೂಕಿನ ಕಮಲಾಪುರದಲ್ಲಿ ಡಿ.07 ಮತ್ತು 08ರಂದು ಗ್ರಾಮದೇವತೆ ಶ್ರೀ ಊರಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ.
ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಊರಮ್ಮ ದೇವಿ ದೇಗುಲದಲ್ಲಿ ಡಿ.07ರಂದು ಮಹಾಗಣಾಪತಿ ಪೂಜೆ, ಚಂಡಿಹೋಮ, ಪ್ರಾರಂಭೋತ್ಸವ ನಡೆಯಲಿದೆ.
ಡಿ.08ರಂದು ಬೆಳಗ್ಗೆ ಗಂಗೆ ಪೂಜೆ, ತನುಕೊಡ ತರುವುದು. ಮೂಲದೇವತಾ ಪ್ರಾರ್ಥನೆ, ಅಭಿಷೇಕ ಮತ್ತು ಚಂಡಿಹೋಮ ಪೂರ್ಣಹುತಿ. ಮಹಮಂಗಳಾರತಿ ಹಾಗೂ 11 ಗಂಟೆ ನಂತರ ಅನ್ನಸಂತರ್ಪಣೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿಯಿAದ ತಿಳಿಸಲಾಗಿದೆ.