ಅಬ್ದುಲ್ ಕಲಾಂ ಉದ್ಯಾನವಕ್ಕೆ 25 ಲಕ್ಷ ರೂ. ಅನುದಾನ

23 MANJU 04
Published on

ಹೊಸಪೇಟೆ : ಇಲ್ಲಿನ ಮೆಹಬೂಬ್ ನಗರದ ಬಳಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಉದ್ಯಾನವನ ನಿರ್ಮಾಣಕ್ಕೆ ಹುಡಾ ಅಧ್ಯಕ್ಷ ಎ.ಎಚ್.ಎನ್ ಮಹಮ್ಮದ್ ಇಮಾಮ್ ನಿಯಾಜಿ ಹಾಗೂ ನಗರಸಭೆ ಅಧ್ಯಕ್ಷ ಎನ್. ರೂಪೇಶ್‌ಕುಮಾರ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಹುಡಾ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ನಗರಸಭೆ 15ನೇ ಹಣಕಾಸು ಆಯೋಗದ ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಒಂದು ಅಭಿವೃದ್ಧಿ ಕಾರ್ಯಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು. ನಗರಸಭೆ ಸದಸ್ಯ ಶೇಕ್ಷಾವಲಿ, ಮುಖಂಡರಾದ ಜಂಬಯ್ಯ, ಮಹಮ್ಮದ್, ಜಾಫರ್, ಎಚ್.ಶಬ್ಬೀರ್, ರಫೀಕ್, ಯಲ್ಲಪ್ಪ, ಬುಡೇನ್ ಸಾಬ್, ಮಹಮ್ಮದ್ ಇಸ್ಮಾಯಿಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net