ಕಲಾವಿದೆ ಕೆ.ಅಂಜಲಿ ಕನ್ಮಲಕಣ್ಮಣಿ ಪುರಸ್ಕಾರ

18 MANJU 03
Published on

ಹೊಸಪೇಟೆ: ಕೈರೆಳಿ ಕಲ್ಚರಲ್ ಅಸೋಸಿಯೇಷನ್ 25ನೇ ವಾರ್ಷಿಕೋತ್ಸವ ಸೆ.20 ಮತ್ತು 21 ರಂದು ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಂದರA ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕೆರಳ ಹಾಗೂ ಕರ್ನಾಟಕದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿದೆ. ಕನ್ನಡ, ಮಳಿಯಾಳಿ, ಹಿಂದಿ ಸೇರಿದಂತೆ ವಿವಿಧ ನಾಡಿನ ಸಾಂಸ್ಕೃತಿಕ ಸೊಬಗನ್ನು ಸಾರುವ ಗೀತಗಾಯನ ನಡೆಯಲಿದೆ. ಸೆ.21ರಂದು ವೇದಿಕೆಯ ಕಾರ್ಯಕ್ರಮ ಅದಕ್ಕೂ ಮುನ್ನ ಕೇರಳಿ ಜನಾಂಗದವರಿಗೆ ವೈವಿಧ್ಯಮಯ ಕ್ರೀಡಾಚಟುವಟಿಕೆಗಳು ನಡೆಯಲಿದೆ. ವೇದಿಕೆ ಕಾರ್ಯಕ್ರಮ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಕನ್ಮಲಕಣ್ಮಣಿ ಪುರಸ್ಕಾರವನ್ನು ಭರತನಾಟ್ಯ ಕಲಾವಿದೆ ಕೆ.ಅಂಜಲಿ ಅವರಿಗೆ ನೀಡಲಾಗುವುದು. ಹಾಗೂ ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ಅಧ್ಯಕ್ಷ ಕೆ.ಎಂ.ಮಥಾಯಿ ಮಾತನಾಡಿ, ನಾವು ಕೇರಳದಿಂದ ಬಂದರು, ಇಲ್ಲಿ ನಮಗೆ ಯಾವುದೇ ರೀತಿಯ ಕೊರತೆಯಾಗಿಲ್ಲ. ಇಲ್ಲೇ ಬೆಳೆದು ಇಲ್ಲಿನ ಸಾಂಸ್ಕೃತಿಕ ಸೊಬಗಿನೊಂದಿಗೆ ನಮ್ಮ ಉತ್ಸವ ಆಚರಿಸುವ ಜತೆ ಸಾಂಸ್ಕೃತಿಕ ಸಂಗಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಕೇರಳದ ಆಚರಣೆ ಜತೆ ಇಲ್ಲಿಯ ಸೊಬಗು ಇಲ್ಲಿಯ ಜನತೆ ಸವಿಯಬೇಕು ಎಂದರು.

ಉಪಾಧ್ಯಕ್ಷ ಮನೋಹರ್ ಪಿಳೈ, ಎಸ್.ಜೋಯ್, ಮೋಹನ್ ಅಯ್ಯರ್, ದೇವದಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net