ಕಾಡಾ ಅಧ್ಯಕ್ಷರನ್ನೇ ಒಳ ಬಿಡದ ಪೊಲೀಸರು

11 MANJU 01
Published on

ಹೊಸಪೇಟೆ: ಉಪಮುಖ್ಯಂಮತ್ರಿ ಡಿ.ಕೆ.ಶಿವಕುಮಾರ್ ತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ ವೇಳೆ ಕಾಡಾ ಅಧ್ಯಕ್ಷ ಹಸನ್ ಸಾಬ ದೋಟಿಹಾಳ ಅವರನ್ನೇ ಒಳಬಿಡದೆ ತಡೆದು ನಿಲ್ಲಿಸಲಾಯಿತು.
ತುಂಗಭದ್ರಾ ‌ಜಲಾಶಯದ ಕ್ರಸ್ಟ್‌ ‌ಗೇಟ್ 19 ಕಳಚಿದ ಹಿನ್ನೆಲೆಯಲ್ಲಿ ‌ಜಲಸಂಪನ್ಮೂಲ‌ ಸಚಿವ ಡಿ.ಕೆ
ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಎನ್.ಎಸ್.ಭೋಸರಾಜು, ನಾಲ್ಕು ಜಿಲ್ಲೆಯ ಶಾಸಕರು ಸೇರಿ ಇತರೆ ಮುಖಂಡರು ಆಗಮಿಸಿದ ವೇಳೆ ಕ್ರಸ್ಟ್‌ ಗೇಟ್ ವೀಕ್ಷಣೆಗೆ ತೆರಳಿದರು.

ಹಿಂದೆ ಬಂದ ಹಸನ್ ಸಾಬ ದೋಟಿಹಾಳ ಕಾರು ತಡೆದರು. ಈ ವೇಳೆ ದೋಟಿಹಾಳ ಹಿಂಬಾಲಕರು ಪೊಲೀಸರ‌ ನಡುವೆ‌ ಮಾತಿನಚಕಮಕಿ ನಡೆಯಿತು. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ ಬಂದೋಬಸ್ತ್ ನಿರತ ಪೊಲೀಸತ ಜತೆ ಮಾತನಾಡಿಸಿದ ವೇಳೆ ಕಾರು ಬಿಡದೇ ಅವರೊಬ್ಬರನ್ನೇ ಒಳಬಿಡಲಾಯಿತು. ನಡೆದುಕೊಂಡೆ ಕಾಡ ಅಧ್ಯಕ್ಷರು ಒಳ ಹೋದ ಘಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net