ಪತ್ರಿಕೋದ್ಯಮ ತರಬೇತಿಗೆ ಅರ್ಜಿ

Published on

ಹೊಸಪೇಟೆ: ಭೋವಿ ಅಭಿವೃದ್ದಿ ನಿಗಮದಿಂದ ಉಚಿತ ಪತ್ರಿಕೋದ್ಯಮ ತರಬೇತಿ ನೀಡಲು ಅರ್ಹ ಭೋವಿ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಪ್ರಯೋಗಿಕ ತರಬೇತಿ ಮತ್ತು ಕ್ಷೇತ್ರ ಅನುಭವವನ್ನು ನೀಡಲು ವಸತಿ ಸಹಿತ 60 ದಿನಗಳ ತರಬೇತಿ ನೀಡಲಾಗುತ್ತದೆ. ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್, ಬೆಂಗಳೂರು ಇವರ ಮೂಲಕ ಉಚಿತ ಪತ್ರಿಕೋದ್ಯಮ ತರಬೇತಿ ನೀಡಲಾಗುತ್ತದೆ.

ಎಸ್ಸೆಸ್ಸೆಲ್ಸಿ, ಪಿ.ಯು.ಸಿ, ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿದವರು ಜಿಲ್ಲಾ ಕಚೇರಿಯಿಂದ ಅರ್ಜಿ ಪಡೆದು ಡಿ.20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕ ಸಿದ್ಧಲಿಂಗ 9731494557, ರಮೇಶ್ ನಾಯ್ಡು 8050665060 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net