ಜೋಳ ಖರೀದಿ ಕೇಂದ್ರ ತೆರೆಯಿರಿ

16 MANJU 06
Published on

ಹೊಸಪೇಟೆ: ಜೋಳ ಖರೀದಿ ಕೇಂದ್ರ ತೆರೆಯಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಸೀಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಣ್ಣ ಮಾತನಾಡಿ, ಕೊಟ್ಟೂರು, ಕೂಡ್ಲಿಗಿ ಸೇರಿ ಎಲ್ಲ ತಾಲೂಕುಗಳಲ್ಲಿ ಜೋಳವನ್ನು ಈ ಬಾರಿ ಹೆಚ್ಚು ಬೆಳೆಯಲಾಗಿದೆ. ಆದರೆ, ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 1600 ರೂ.ನಿಂದ 2 ಸಾವಿರ ರೂ.ಗಳಿಗೆ ಮಾರಾಟ ಮಾಡಬೇಕಾಗಿದೆ. ಜೋಳ ಖರೀದಿ ಕೇಂದ್ರ ತೆರೆಯದೇ ಸರ್ಕಾರ ಮೌನವಾಗಿರುವುದು ಸರಿಯಲ್ಲ. ರಾಗಿ, ಮೆಕ್ಕೆಜೋಳ, ಬಿಳಿ ಜೋಳ ಖರೀದಿ ಕೇಂದ್ರ ಸರ್ಕಾರ ಆರಂಭಿಸಬೇಕು. ಅಲ್ಲದೇ ತಾಲೂಕಿನಲ್ಲಿ ಈರುಳ್ಳಿ ಬೆಳೆಯೂ ಕುಸಿದಿದ್ದು, ಸರ್ಕಾರದಿಂದ ಎಕರೆಗೆ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಶ್ರೀಧರ ಎಸ್.ಒಡೆಯರ್, ರಾಜಣ್ಣ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net