ನೀರಿನ ನಿರ್ವಹಣೆಗೆ ಸಮಿತಿ ರಚಿಸಿ

19 MANJU 03
Published on

ಹೊಸಪೇಟೆ: ಗ್ರಾಮ ಪಂಚಾಯಿತಿಯಿAದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸಿ ಜೆಜೆಎಂ ಕಾಮಗಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಗೊಳ್ಳಬೇಕೆಂದು ಜಿ.ಪಂ. ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಹೇಳಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಬೆಳಗೋಡು, ಕಲ್ಲಿರಾಂಪುರ, ಕಾಲಘಟ್ಟ, ನರಸಾಪುರ , ಕಡ್ಡಿರಾಂಪುರ ಬೆನಕಾಪುರ ಮತ್ತು ಮಲಪನಗುಡಿ ಗ್ರಾ.ಪಂ. ಅಧಿಕಾರಿಯವರಿಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಸಕ್ರಿಯಗೊಳಿಸಿ ಕಾರ್ಯಚರಣೆ ಮತ್ತು ನಿರ್ವಹಣೆ ನೀತಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಅನುಷ್ಟಾನಗೊಳಿಸಬೇಕು. ಜೆಜೆಎಂ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಕುಡಿವ ನೀರಿನ ಪೈಪ್‌ಲೈನ್‌ಗಳಿಗೆ ಮೀಟರ್ ಅಳವಡಿಸುವುದರಿಂದ ನೀರಿನ ಮೌಲ್ಯ ಸಾರ್ವಜನಿಕರಿಗೆ ತಿಳಿಯುತ್ತದೆ. ಜಿಲ್ಲೆಯ ಎಲ್ಲಾ ಗ್ರಾಮವನ್ನು 24*7 ಗ್ರಾಮವನ್ನಾಗಿ ಘೊಷಿಸಲು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಬಸವರಾಜು, ತಾಪಂ ಇಒ ಎಂ.ಡಿ.ಆಲAಭಾಷಾ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಎ ಎಸ್.ದೀಪಾ, ಪಿಆರ್‌ಇಡಿ ಎಇಇ ಸುರೇಶ್, ಗ್ರಾಮೀಣ ನೀರು ಸರಬರಾಜು ಇಇ ವೀರೇಶ್ ನಾಯಕ, ಜೆಇ ಸುರೇಶ್, ನಾಗೇನಹಳ್ಳಿ ಪಿಡಿಓ ವಾಸುಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net