

ಹಗರಿಬೊಮ್ಮನಹಳ್ಳಿ : ಇಲ್ಲಿಯ ಜೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಇ.ಇ. ಹುಸೇನ್ ಸಾಬ್ ಬುಧವಾರ ರಾತ್ರಿ 8ಗಂಟೆಗೆ ಲಂಚ ಸ್ವೀಕರಿಸುತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಗವಿಸಿದ್ದಯ್ಯ ಹಿರೇಮಠ ಅವರು ಗುತ್ತಿಗೆ ಆಧಾರದಲ್ಲಿ ಬಿಟ್ಟಿದ್ದ ಕಾರಿನ ನವೀಕರಣಕ್ಕೆ 10 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು ಹೊಸಪೇಟೆಯ ಲೋಕಾಯುಕ್ತರಿಗೆ ಗವಿಸಿದ್ದಯ್ಯ ಹಿರೇಮಠ ದೂರು ನೀಡಿದರು. ಬಳಿಕ ಲೋಕಾಯುಕ್ತ ಪಿಐ ರಾಜೇಶ್ ಲಮಾಣಿ ನೇತೃತ್ವದಲ್ಲಿ ತಂಡ ದಾಳಿ ನಡೆಸಿದೆ. ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸನೆ ಮುಂದುವರೆದಿದೆ.
ಮುಖ್ಯ ಪೇದೆಗಳಾದ ಸುಭಾಷ್, ಸುರೇಶ್, ಶ್ರೀನಿವಾಸ, ಕೃಷ್ಣ, ರೇಣುಕಪ್ಪ, ಕುಮಾರ್ ನಾಯ್ಕ್, ಚನ್ನಬಸಪ್ಪ ಇದ್ದರು.