ಜೆನ್ನಿ ಮಿಲ್ಕ್ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ

11 MANJU 06
Published on

ಹೊಸಪೇಟೆ: ಜೆನ್ನಿ ಮಿಲ್ಕ್ ಕಂಪನಿಯಿಂದ ಕತ್ತೆ ಹಾಲಿನ ಹೆಸರಲ್ಲಿ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಿಐಡಿಯಿಂದ 6 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಜೆನ್ನಿ ಮಿಲ್ಕ್ ಕಂಪನಿಯಿಂದ ರೈತರಿಗೆ ವಂಚನೆ ಆಗಿದೆ ಎಂದು ಪಟ್ಟಣ ಠಾಣೆ ಪೊಲೀಸರು ಕಳೆದ 2024ರ ಸೆ.19ರಂದು 319 ಜನರಿಗೆ ವಂಚನೆಯಾಗಿದೆ ಎಂದು 7 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಲಬುರಗಿಯ ಸಿಐಡಿ ಡಿವೈಎಸ್ಪಿ ಅಸ್ಲಾಂಪಾಷಾ ಅವರ ನೇತೃತ್ವದಲ್ಲಿ 6 ತಿಂಗಳ ಕಾಲ ತನಿಖೆ ನಡೆಸಿ ಈಗ ನಗರದ ಪ್ರಥಮ ದರ್ಜೆಯ ಸಿವಿಲ್ ನ್ಯಾಯಾಲಯದಲ್ಲಿ 6661 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಆರೋಪಿಗಳಾದ ಕಂಪನಿ ಎಂ.ಡಿ. ನೆಲ್ಲೂರಿನ ನೂತಲಪಾಟಿ ಮುರುಳಿ, ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ ಹಾಗೂ ಸಯ್ಯದ್ ಮೊಹಮ್ಮದ್ ಗೌಸ್ ಅವರನ್ನು ಮೊದಲು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಹರ್ಷವರ್ಧನ ರಾಜು, ಜಿ.ಯೋಗಾನಂದ ರೆಡ್ಡಿ ಇವರನ್ನು ನಂತರ ಬಂದಿಸಿದರು. ತನಿಖೆ ವೇಳೆ ಅಂಜಿನಪ್ಪ ಹಾಗೂ ಕವಿತಾ ಎಂಬುವರ ವಿರುದ್ಧವು ಪ್ರಕರಣ ದಾಖಲಾಗಿತ್ತು. ಎಲ್ಲಾರಿಗೂ ಜಮೀನು ಮಂಜುರಾಗಿದೆ.

ನಗರ ಸೇರಿದಂತೆ ಆಂದ್ರ ಪ್ರದೇಶದ ತೆಲಂಗಾಣ ಹಾಗೂ ಇತರೆ ಕಡೆ ಹೋಗಿ ವಿಚಾರಣೆ ನಡೆಸಲಾಗಿತ್ತು. 11 ತಿಂಗಳ ನಂತರ ವಂಚನೆ ಮಾಡಿರುವುದು ಸತ್ಯ ಎಂದು 6661 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ಮೂಲಗಳು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net