

ಹೊಸಪೇಟೆ: ಸರ್ಕಾರ ಮಹನೀಯರ ಜಯಂತಿಗಳ ಆಚರಣೆಗೆ ಅನುದಾನ ಬಿಡುಗಡೆ ಮಾಡುತ್ತದೆ, ಅದ್ದೂರಿ ಅಚರಣೆ ಮಾಡಲು ಸಮುದಾಯಗಳು ಕೈ ಜೋಡಿಸಿದಾಗ ಆ ಜಯಂತಿಗಳಿಗೆ ಮೆರಗು ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕನಕದಾಸರ ಜಯಂತಿಯ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಮತ್ತು ಸಮುದಾಯದ ಸಮನ್ವದಲ್ಲಿ ಒಟ್ಟು 46 ಮಹನೀಯರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ. ಕನಕ ದಾಸರ ಜಯಂತಿಯAದು ಭಾವಚಿತ್ರದ ಮೆರವಣಿಗೆ ನ.18 ರಂದು ಬೆಳಿಗ್ಗೆ 9 ಗಂಟೆಗೆ ಅಭಯ ಹಸ್ತ ಆಜಂನೇಯ ದೇವಸ್ಥಾನದಿಂದ ವೀರ ಮದಕರಿ ವೃತ್ತ, ಉದ್ಯೋಗ ಪೆಟ್ರೋಲ್ ಬಂಕ್, ಮಸೀದಿ ರಸ್ತೆ, ಗಾಂಧಿ ಚೌಕ್, ಕೆಕೆಆರ್‌ಟಿಸಿ ಬಸ್ ನಿಲ್ದಾಣ, ಕೃಷ್ಣ ಪ್ಯಾಲೇಸ್ ಮಾರ್ಗವಾಗಿ ನೇರವಾಗಿ ಕನಕ ವೃತ್ತದ ವರೆಗೆ ಸಾಂಸ್ಕೃತಿಕ ಕಲಾ ತಂಡಗಳೊAದಿಗೆ ಮೆರವಣಿಗೆ ನಡೆಸಲಾಗುವುದು. ಸಮುದಾಯದವರ ನಿರ್ಧಾರದಂತೆ ಈ ಭಾರಿ ವೇದಿಕೆ ಕಾರ್ಯಕ್ರಮವನ್ನು ನಗರಸಭೆ ಆವರಣದಲ್ಲಿ ನಡೆಸಲಾಗುವುದು ಎಂದರು.
ಜಿ.ಪA. ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಡಿಎಚ್‌ಒ ಡಾ.ಶಂಕರ್ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಿಡಿ ಎಸ್.ಶ್ವೇತಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ತಹಶೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ, ನಗರಸಭೆಯ ಪೌರಾಯುಕ್ತ ಚಂದ್ರಪ್ಪ ಇತರರಿದ್ದರು.