ಧಾನದ ನೀಡಿದ ಜಮೀನಿನಲ್ಲಿ ಪಟ್ಟ ನೀಡದಿರಲಿ

27 MANJU 04
Published on

ಹೊಸಪೇಟೆ: ಹೈಸ್ಕೂಲ್ ಗೆ ಧಾನದ ನೀಡಿದ 42 ಎಕರೆ ಜಮೀನನ್ನು ರೈತರಿಗೆ ಪಟ್ಟ ನೀಡದಂತೆ ಹರಪನಹಳ್ಳಿ ಹಾರಕನಹಾಳು ನಿವಾಸಿ ಗುರುಬಸನಗೌಡ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸೋಮವಾರ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್‌ಗೆ ಮನವಿ ಸಲ್ಲಿಸಿದರು.

ಹಾರಕನಹಾಳು ಗ್ರಾಮದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಶಾಲೆಗೆ ಎಂದು ಬ್ರಾಹ್ಮಣ ಕುಟುಂಬ 42 ಎಕರೆ ಜಮೀನಿ ಧಾನ ನೀಡಿದ್ದಾರೆ. ಆ ಜಮೀನು ಇನ್ನು ಅಭಿವೃದ್ಧಿ ಆಗಿಲ್ಲ. ಕೆಲ ಅಧಿಕಾರಿ ವರ್ಷ ಹಣದ ಆಸೆಗೆ ರೈತರ ಹೆಸರಿನಲ್ಲಿ ಪಟ್ಟ ನೀಡಲು ಸಿದ್ದರಾಗಿದ್ದಾರೆ. ಗ್ರಾಮಸ್ಥರು ಸೇರಿ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮೈಗೊಂದಿಲ್ಲ. ಕಚೇರಿಗಳಲ್ಲಿ ಅಧಿಕಾರಿಗಳಿಗೆ ಕೇಳಿದರೆ, ಉತ್ತರ ನೀಡದೆ ಮೊಬೈಲ್ ನಲ್ಲಿ ಕಾಲ ಹರಣ ಮಾಡುತ್ತಾರೆ. ಇನ್ನೂ ಅರಣ್ಯ ಜಮೀನಿನಲ್ಲಿ ಕೆರೆ ನಿರ್ಮಾಣ ಸೇರಿದಂತೆ ನಮ್ಮ ಭಾಗದಲ್ಲಿ ಹಲವು ಕಾಮಗಾರಿಗಳು ಮಾಡದೆ ಲೂಟಿ ಹೊಡೆದಿದ್ದಾರೆ. ಇವೆಲ್ಲ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಿ. ನಾನು ಸ್ವತಂತ್ರಕ್ಕಾಗಿ ಹೋರಾಡಿದ ಕುಟುಂಬದವನು. ಈ ಜಮೀನಿಗಾಗಿ ಹಾಗೂ ಈ ವ್ಯವಸ್ಥೆಗಾಗಿ ಹೋರಾಡಲು ನಾನು ಸಿದ್ದನಿರುವೆ ಎಂದು ಸಚಿವ ಜಮೀರ್ ಗೆ ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್‌ಖಾನ್ ಮಾತನಾಡಿ, ಜನತಾದರ್ಶನ ಮೂಲಕ ಕೇವಲ ಸಾರ್ವಜನಿಕರ ಅಹವಾಲು ಕೇಳುವುದು ಮಾತ್ರವಲ್ಲದೇ ಆದಷ್ಟು ಶೀಘ್ರವಾಗಿ ಪರಿಹಾರ ಒದಗಿಸುವ ಕ್ರಮವನ್ನು ಕೈಗೊಂಡು ನಾಗರೀಕರಿಗೆ ಭರವಸೆ ಮೂಡಿಸಲಾಗುವುದು. ನಿಮ್ಮ ಸಮಸ್ಯೆ ಕೂಡ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವೆ ಎಂದರು.

ಸ್ಥಳದಲ್ಲಿಯೇ ಪರಿಹರಿಸಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾAಶದಲ್ಲಿ ನಮೂದಿಸಿ ಮೊಬೈಲ್ ಮೂಲಕ ಅರ್ಜಿದಾರರನ್ನು ಸಂಪರ್ಕಿಸಿ ಪರಿಹಾರ ಒದಗಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net