ಗ್ರಾಮಗಳಿಗೆ ಶುದ್ಧ ಕುಡಿವ ನೀರು ಒದಗಿಸಿ

19 MANJU 04
Published on

ಹೊಸಪೇಟೆ: ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಅಧಿಕಾರಿಗಳಗಿಎ ಜಲ ಜೀವನ ಮಿಷನ್ ಅನುಷ್ಠಾನದ ಕುರಿತು ಒಂದು ದಿನದ ಕಾರ್ಯಗಾರ ನಡೆಯಿತು.

ಜಿ.ಪಂ. ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಶಾ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿವ ನೀರನ್ನು ಸರಬರಾಜು ಮಾಡುವ ಮೂಲಕ ಪ್ರಯೋಜನೆ ಪಡೆಯಬೇಕಿದೆ. ಗ್ರಾಮ ಪಂಚಾಯಿತಿ ಸಕ್ರೀಯಗೊಳಿಸುವ ಮಟ್ಟದಲ್ಲಿ ಪ್ರತ್ಯೇಕವಾಗಿ ವಿ.ಡಬ್ಲ್ಯೂ.ಎಸ್.ಸಿ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸಿ ನೀರು ಸರಬರಾಜಿಗೆ ಸಂಬAಧಿಸಿದ ಖರ್ಚು ವೆಚ್ಚಗಳನ್ನು ಖಾತೆಯಿಂದ ನಿಭಾಯಿಸುವುದರಿಂದ ಗ್ರಾಮ ಪಂಚಾಯಿತಿಗಳು ಅರ್ಥಿಕವಾಗಿ ಸದೃಡತೆಯನ್ನು ಹೊಂದಲು ಸಹಕಾರಿಯಾಗುತ್ತದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿ ಜಾಫರ್ ಶರೀಫ್ ಸುತಾರ್ ಮಾತನಾಡಿರು. ವಿಭಾಗದ ಎಇ ಎಸ್.ದೀಪಾ ವಾಸ್ತವಿಕವಾಗಿ ಮಾತನಾಡಿದರು.

ಜಿ.ಪಂ. ಯೋಜನಾ ನಿರ್ದೇಶಕ ಆಶೋಕ್ ತೋಟದ, ಫೀಡ್‌ಬ್ಯಾಕ್ ಪೋಂಡೇಶನ್ ಸಿಇಓ ಅಜಯ್ ಸೀನಾ, ರಾಜ್ಯ ಎಚ್.ಆರ್.ಡಿ, ಸಮಾಲೋಚಕ ಸಿ.ಜಗದೀಶ, ಡಬ್ಲ್ಯೂ.ಕ್ಯು ಎಂ.ಎಸ್, ಸಮಾಲೋಚಕ ನಿಶಾತ್ ಸಾಧಿಯಾ, ಜಿ.ಡಬ್ಲ್ಯೂ.ಎಂ. ಸಮಾಲೋಚಕ ವಿನೋದ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net