ಛಲದೊಂದಿಗೆ ಕಠಿಣ ಪರಿಶ್ರಮ ಯಶಸ್ಸು

241222 Hospete Youth Thinking and Youth Celebration Programme
ಹೊಸಪೇಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುವ ಚಿಂತನ ಮತ್ತು ಯುವ ಸಂಭ್ರಮ’ ಕಾರ್ಯಕ್ರಮವನ್ನು ಡಾ.ವಿದ್ಯಾಕುಮಾರಿ ಉದ್ಘಾಟಿಸಿದರು.
Published on

ಹೊಸಪೇಟೆ: ಕಠಿಣ ಪರಿಶ್ರಮ, ಛಲದಿಂದ ಯುವ ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂದು ತುಮಕೂರು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಜಿಲ್ಲಾ ಕ್ರೀಡಾಂಗಣ ಭವನದಲ್ಲಿ ಸಖಿ ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡಿದ್ದ ‘ಯುವ ಚಿಂತನ ಮತ್ತು ಯುವ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 15 ರಿಂದ 29 ವಯಸ್ಸಿನ ಒಳಗಿರುವವರು ಎಲ್ಲರೂ ಯುವಕರು ಎಂದು ಸಮೀಕ್ಷೆ ಹೇಳುತ್ತಿದೆ. ಈ ವಯಸ್ಸಿನಲ್ಲಿ ಯುವಕರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಇಂತಹ ಯುವಕರಲ್ಲಿ ಮಾತ್ರ ಇರುತ್ತದೆ. ತೆಗೆದುಗೊಳ್ಳುವ ತೀರ್ಮಾನಗಳು ಉತ್ತಮ ಭವಿಷ್ಯಕ್ಕೆ ನಾಂದಿಯಾಗುವಂತೆ ಇರಬೇಕು. ಇದರ ಜತೆಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಖಿ ಟ್ರಸ್ಟ್‌ನ ನಿರ್ದೇಶಕಿ ಡಾ.ಎಂ.ಭಾಗ್ಯಲಕ್ಷೀ ಮಾತನಾಡಿ, 2002ರಲ್ಲಿ ಆರಂಭಗೊಂಡ ಟ್ರಸ್ಟ್ ಅನೇಕ ಏರಿಳಿತಗಳ ಕಂಡಿದ್ದು, ಈಗ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಟ್ರಸ್ಟ್‌ನ ಯುವ ಸಂಗಾತಿಗಳ ಶ್ರಮ ಅಪಾರ. ರೈತರು, ಕಾರ್ಮಿಕರು, ದೇವದಾಸಿಯರು, ಯುವಕರು, ಶೋಷಿತರ ಅಭ್ಯುದಯಕ್ಕೆ ಟ್ರಸ್ಟ್ ಹಗಲಿರುಳು ಶ್ರಮಿಸಿದೆ ಎಂದರು.

ಯುವಜನ ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ.ಕೆ.ಟಿ.ತಿಪ್ಪೇಸ್ವಾಮಿ ಕರ್ನಾಟಕ ನೂತನ ಯುವ ನೀತಿಯನ್ನು ವಿವರಿಸಿದರು. ಅಜೀಂ ಪ್ರೇಮ್‌ಜೀ ಫೌಂಡೇಷನ್ ಪ್ರತಿನಿಧಿ ಉದಯಕುಮಾರ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net