ಇನ್ಹರ್ ವೀಲ್ ಪದಾಧಿಕಾರಿಗಳ ಪದಗ್ರಹಣ ಜು.16ಕ್ಕೆ

12 MANJU 03
Published on

ಹೊಸಪೇಟೆ : ವಿಭಿನ್ನ ಆಲೋಚನೆ, ವಿಭನ್ನ ಯೋಜನೆಗಳೊಂದಿಗೆ ಈ ವರ್ಷ ಇನ್ಹರ್ ವೀಲ್ ಡಿಸ್ಟಿçಕ್ಟ್ 316 ಕಾರ್ಯನಿರ್ವಹಿಸುತ್ತದೆ ಎಂದು ನೂತನ ಅಧ್ಯಕ್ಷೆ ಜಯಶ್ರೀ ಸಾಗರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನಗರ ಖಾಸಗಿ ಹೊಟೇಲ್‌ನಲ್ಲಿ ನೂತನ ಇನ್ಹರ್ ವೀಲ್ ಜಿಲ್ಲೆ 316 ಪದಗ್ರಹಣ ಕಾರ್ಯಕ್ರಮ ಜು.16 ರಂದು ನಡೆಯಲಿದೆ. ಕ್ಲಬ್ ಪ್ರತಿವರ್ಷ ವಿಭಿನ್ನ ದೈಯದಿಂದ ಕಾರ್ಯನಿರ್ವಹಿಸಲು ಮುಂದಾಗಿದೆ. ಈ ವರ್ಷ ಪ್ಲಾಸ್ಟಿಕ್ ಮುಕ್ತ ಭಾರತ ಎಂಬ ಯೋಜನೆಯೊಂದಿಗೆ ಉಚಿತ ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಪ್ಲಾಸ್ಟಿಕ್ ಮುಕ್ತ, ಗರ್ಭಕಂಠ ಕ್ಯಾನ್ಸರ್, ಸಂತೋಷದಾಯಕ ಶಾಲೆ, ಹೀಗೆ 2025-26 ವರ್ಷ ಅತ್ಯಂತ ವಿಭನ್ನವಾಗಿ ಇನ್ಹರ್ ವೀಲ್ ಜಿಲ್ಲೆಯಲ್ಲಿ ಆಚರಿಸಲಾಗುವುದು ಎಂದರು.

ಪ್ರಮುಖರಾದ ನಾಮೀಶಾ, ಮೇಘನ ಹಿರೇಮಠ, ರಜನಿ ಮಾನೆ, ಆರತಿ ರಾಜಾಪೂರ, ರೇಖಾ ಪ್ರಕಾಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net