ಶಾಸಕ ಎಚ್.ಆರ್.ಗವಿಯಪ್ಪ ಕ್ಷೇತ್ರಕ್ಕೆ ಶಾಪ

HUDA
H N F IMAM
Published on

ಹೊಸಪೇಟೆ: ಕ್ಷೇತ್ರಕ್ಕೆ ಅಂದಾಜು 150 ಕೋಟಿ ರೂ. ಅನುದಾನ ಬಂದರೂ ಶಾಸಕ ಎಚ್.ಆರ್.ಗವಿಯಪ್ಪ ಸುಳ್ಳು ಹೇಳುತ್ತಿದ್ದಾರೆ ಎಂದು ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ ಹೇಳಿದರು.

ನಗರದ ಹುಡಾ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಂಜುAಡಪ್ಪ ವರದಿ ಪ್ರಕಾರ ಹೊಸಪೇಟೆಗೆ ಕೆಕೆಆರ್‌ಡಿಬಿಯಿಂದ ಪ್ರತಿ ವರ್ಷ ಅನುದಾನ ಬಿಡುಗಡೆ ಆಗುತ್ತದೆ. 2023-24 ರಲ್ಲಿ ಮ್ಯಾಕ್ರೋ ಅಡಿ 11.07 ಕೋಟಿ ರೂ., ಮುಖ್ಯಮಂತ್ರಿ ವಿವೇಚನೆಯಡಿ 5 ಕೋಟಿ ರೂ., ಈ ಸಾಲಿನಲ್ಲಿ ಜಿಲ್ಲೆಗೆ 122 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ 250 ಹಾಸಿಗೆಗಳ ಜಿಲ್ಲಾಸ್ಪತ್ರೆಗೆ 29 ಕೋಟಿ ರೂ. ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಾಲಿನಲ್ಲಿ ಮ್ಯಾಕ್ರೋ ಅಡಿ 8 ಕೋಟಿ ರೂ. ಮೈಕ್ರೋ ಅಡಿ 10 ಕೋಟಿ ರೂ., ಪಂಚಾಯತ್ ರಾಜ್ ಇಲಾಖೆಯಿಂದ 2023-24 ರಲ್ಲಿ 15 ಕೋಟಿ ರೂ., ಈ ಸಾಲಿನಲ್ಲಿ 5 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ 15 ಕೋಟಿ ರೂ., ಎಸ್‌ಎಚ್‌ಡಿಪಿ ಅಡಿ ಈ ಸಾಲಿನಲ್ಲಿ 20 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಜಿಲ್ಲಾ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 5 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ನೀಡಿದೆ. ಇನ್ನು 15 ಕೋಟಿ ರೂ.ಅನುದಾನ, ನಗರಾಭಿವೃದ್ಧಿ ಇಲಾಖೆಯಿಂಲೂ 15 ಕೋಟಿ ರೂ. ಅನುದಾನಕ್ಕೂ ಕ್ರಿಯಾ ಯೋಜನೆ ರೂಪಿಸಿಲ್ಲ ಈ ವರೆಗೆ ಕ್ರಿಯಾ ಯೋಜನೆ ಮಾಡಿಲ್ಲ. ಕಳೆದ ಎರಡು ಸಾಲಿನಲ್ಲಿ ವಿಜಯನಗರ ಕ್ಷೇತ್ರಕ್ಕೆ ಅಂದಾಜು 138 ಕೋಟಿ ರೂ. ಅನುದಾನ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವುದೇ ಸಚಿವರ ಜತೆ ಉತ್ತಮ ಬಾಂಧವ್ಯ ಹೊಂದಿಲ್ಲ. ಇವರ ಸ್ವ ಪ್ರತಿಷ್ಠೆಗಾಗಿ ಕ್ಷೇತ್ರ ಬಡ ಆಗುತ್ತಿದೆ. ಒಂದು ರೀತಿಯಲ್ಲಿ ಗವಿಯಪ್ಪ ಹೊಸಪೇಟೆ ಕ್ಷೇತ್ರಕ್ಕೆ ಶಾಪ ಆಗಿ ಪರಿಣಮಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಬಿಟ್ಟು ಬಿಜೆಪಿ ಆರ್.ಎಸ್.ಎಸ್. ನವರ ಜತೆ ಸಂಪರ್ಕ ಹೊಂದಿರುವ ಇವರಿಗೆ ಮುಂದೆ ಜನ ಪಾಠ ಕಲಿಸಲಿದ್ದಾರೆ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net