

ಹೊಸಪೇಟೆ: ನಗರದ ಗೌಳೇರಹಟ್ಟಿ ಪ್ರದೇಶದ ಬಳಿ ಬಸವಣ್ಣ ಕಾಲುವೆ ಜಾಗದಲ್ಲಿ ಹಾಕಲಾಗಿದ್ದ ಗುಡಿಸಲುಗಳನ್ನು ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ ನೇತೃತ್ವದಲ್ಲಿ ಭಾನುವಾರ ತೆರವುಗೊಳಿಸಲಾಯಿತು.
ಬಸವಣ್ಣ ಕಾಲುವೆ ಜಾಗದಲ್ಲಿ ಗುಡಿಸಲುಗಳಾಗಲಿ, ಮನೆಗಳನ್ನಾಗಲಿ ಅಕ್ರಮವಾಗಿ ನಿರ್ಮಾಣ ಮಾಡಬಾರದು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಿ ಈ ಹಿಂದೆಯೇ ಮೌಖಿಕವಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೇ, ತಹಸೀಲ್ದಾರ್ ಮತ್ತು ಗ್ರಾಮೀಣ ಠಾಣೆ ಪೊಲೀಸರ ಗಮನಕ್ಕೂ ತಂದಿದ್ದರು. ತಹಸೀಲ್ದಾರ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ತೆರವು ಮಾಡಲು ಸೂಚನೆ ಕೂಡ ನೀಡಿದ್ದರು. ಸ್ವಯಂ ತೆರವು ಮಾಡಿಕೊಳ್ಳುತ್ತೇವೆ ಎಂದು ನಿವಾಸಿಗಳು ಹೇಳಿದ್ದರು. ಆದರೆ, ತೆರವು ಮಾಡದ ಹಿನ್ನೆಲೆಯಲ್ಲಿ ಜೆಸಿಬಿ ತಂದು ಟೆಂಟ್ ಮಾದರಿ ಗುಡಿಸಲುಗಳನ್ನು ತೆರವುಗೊಳಿಸಿದರು. ಗ್ರಾಮೀಣ ಠಾಣೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.