ಅಕ್ರಮ ಗೃಹಬಳಕೆ ಸಿಲಿಂಡರ್ ಬಳಕೆ ತಡೆಯಲಿ

Published on

ಹೊಸಪೇಟೆ: ಎಲ್‌ಪಿಜಿಯ ಮೇಲಿನ ಜಿಎಸ್‌ಟಿ ಶೇ 5ರಷ್ಟಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದೆ. ಅದಕ್ಕಾಗಿಯೇ ವಾಣಿಜ್ಯ ಬಳಕೆಯ ಸಿಲಿಂಡರ್ ಬಹುತೇಕ ದುಪ್ಪಟ್ಟು ದರವಿದೆ. ಜಿಎಸ್‌ಟಿ ವಂಚನೆ ಗೃಹಬಳಕೆ ಸಿಲಿಂಡರ್ ಅಕ್ರಮವಾಗಿ ಬಳಕೆಯಾಗುತ್ತಿದೆ ಎಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಮುಖ್ಯಸ್ಥ ಎಸ್.ಚೇತನ್ ಕುಮಾರ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೃಹಬಳಕೆ ಎಲ್‌ಪಿಜಿ ಅಕ್ರಮ ದಂಧೆ ಅವ್ಯಾಹತವಾಗಿ ಬಳಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪ್ರತಿ ತಿಂಗಳು 10 ಕೋಟಿ ರೂ.ನಷ್ಟು ಜಿಎಸ್‌ಟಿ ವಂಚನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಈ ದಂಧೆಯ ಕುರಿತಂತೆ ತೈಲ ಕಂಪನಿಗಳು ಎಲ್‌ಪಿಜಿ ವಿತರಕರು ಮತ್ತು ತೈಲ ಕಂಪನಿಗಳ ಮಾರಾಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು.

ನಮ್ಮ ಸಂಘಟನೆಯಿAದ ಈಗಾಗಲೇ ರಾಜ್ಯದ 23 ಜಿಲ್ಲೆಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದುರ್ಬಳಕೆ ಕುರಿತಂತೆ ಅರಿವು ಮೂಡಿಸುವ ಕೆಲಸ ಮಾಡಿದೆ. ಹಾಸನ, ರಾಯಚೂರು, ಗದಗ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ರಾಯಚೂರಿನಲ್ಲಿ ಡಿಸಿ ಕಚೇರಿ ಮುಂದೆ ಅಕ್ರಮ ದಂಧೆ ನಡೆಯುತ್ತಿದೆ ಎಂದರು.

ಬಾರ್‌ಕೋಡ್ ಕಡ್ಡಾಯಗೊಳಿಸುವುದು, ಒಟಿಪಿ ಕಡ್ಡಾಯಗೊಳಿಸುವುದು, ಪ್ರತಿ ವರ್ಷ ಕೆವೈಸಿ ನವೀಕರಿಸುವ ಕೆಲಸ ಮಾಡಬೇಕು. ಇದರಿಂದ ಕಾಳಸಂತೆಯಿAದ ವಶಪಡಿಸಿಕೊಂಡಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಯಾವ ವಿತರಕರು ಮಾರಾಟ ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ತೈಲ ಕಂಪನಿಗಳಿಗೆ ಸುಲಭವಾಗುತ್ತದೆ. ಎಲ್‌ಪಿಜಿ ದುರ್ಬಳಕೆಗೆ ಕಠಿಣ ಶಿಕ್ಷೆಯನ್ನೂ ವಿಧಿಸಬೇಕು ಎಂದು ಒತ್ತಾಯಿಸಿದರು. ಸಂಸ್ಥೆಯ ಉತ್ತರ ಕರ್ನಾಟಕ ವಿಭಾಗದ ಮುಖ್ಯಸ್ಥ ಅರುಣ್ ಮಾನಗಾಂವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net