ಶಾಸಕರೇ ರಾಜೀನಾಮೆ ಯಾವಾಗ?

news
ಎಚ್.ಆರ್.ಗವಿಯಪ್ಪ
Published on

ಹುಡಾ ಅಧ್ಯಕ್ಷರಾಗಿ ಎಚ್‌ಎನ್‌ಎಫ್ ಇಮಾಮ್ ನಿಯಾಜಿ ಆಯ್ಕೆಯಾಗಿದ್ದಾರೆ ರಾಜೀನಾಮೆ ಯಾವಾಗ ಕೊಡ್ತೀರಾ ಶಾಸಕರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್.ಆರ್.ಗವಿಯಪ್ಪ ಅವರನ್ನು ಅಳಕಿಸುವಂತೆ ವೈರಲಾಗಿದೆ.

ಹೊಸಪೇಟೆ ಮಹಾ ಜನತೆಯ ಪ್ರಶ್ನೆ ಕೆಲವು ತಿಂಗಳ ಹಿಂದೆ ಹುಡಾ ಅಧ್ಯಕ್ಷರಾಗಿ ಇಮಾಮ್ ನಿಯಾಜಿ ರವರು ಆಯ್ಕೆಯಾಗಿದ್ದರು. ಇದನ್ನು ಹೈಕಮಾಂಡ್ ಮಟ್ಟದಲ್ಲಿ ಪ್ರಶ್ನಿಸಿದ್ದ 90 ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರು ಒಂದು ವೇಳೆ ಆಯ್ಕೆಯ ಆದೇಶವನ್ನು ಹಿಂಪಡೆಯದಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಒಡ್ಡುವ ಮೂಲಕ ಇಮಾಮ್ ನಿಯಾಜಿ ಆಯ್ಕೆಯ ಆದೇಶವನ್ನು ರದ್ದುಗೊಳಿಸಿದ್ದರು. ಆದರೆ ಈಗ ಇಮಾಮ್ ನಿಯಾಜಿ ಮತ್ತೆ ಹುಡಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ನಿಮ್ಮ ರಾಜೀನಾಮೆಗಾಗಿ ಕಾಯುತ್ತಿದ್ದೇವೆ. ಹೇಳಿ ಶಾಸಕರೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಯಾವಾಗ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net