ರೈಲಗಳ ಸಂಚಾರ ಪುನರಾರಂಭಿಸಿ

Train
ಹುಬ್ಬಳ್ಳಿಯಲ್ಲಿ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಅರವಿಂದ್ ಶ್ರೀವಾಸ್ತವ್ಗೆ ಬುಧವಾರ ನೈರುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಬಾಬುಲಾಲ್ ಜೈನ್, ರೈಲ್ವೆ ಸಲಹಾ ಸಮಿತಿಯ ಸದಸ್ಯ ಆದೆಪ್ಪ ಗೌಡ ಮನವಿ ಸಲ್ಲಿಸಿದರು.
Published on

ಹೊಸಪೇಟೆ: ಈ ಭಾಗದ ರೈಲ್ವೇ ಬೇಡಿಕೆಗಳಿಗೆ ನೈರುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿಯಿಂದ ಹುಬ್ಬಳ್ಳಿಯಲ್ಲಿ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಅರವಿಂದ್ ಶ್ರೀವಾಸ್ತವ್‌ಗೆ ಬುಧವಾರ ಮನವಿ ಸಲ್ಲಿಸಿದರು.

ಕೋವಿಡ್ ಪೂರ್ವದಲ್ಲಿ ಕೊಲ್ಹಾಪುರ-ಹೈದರಬಾದ್ ನಡುವೆ ಖಾಯಂ ಆಗಿ ಸಂಚರಿಸುತ್ತಿದ್ದ ಈ ರೈಲನ್ನು ಕೋವಿಡ್ ನಂತರ ಬೆಳಗಾವಿ-ಹುಬ್ಬಳ್ಳಿ-ಹೊಸಪೇಟೆ-ಹೈದರಬಾದ-ಭದ್ರಾಚಲಂ ನಡುವೆ ವಿಶೇಷ ರೈಲಾಗಿ ಪರಿವರ್ತಿಸಿ ಈಗ ಸಂಚಾರ ನಿಲ್ಲಿಸಲಾಗಿದೆ. ಇದರಿಂದ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ಮಂತ್ರಾಲಯ, ಹೈದರಬಾದ್ ಕಡೆಗೆ ನೇರ ಸಂಪರ್ಕ ಇಲ್ಲದಂತಾಗಿದೆ. ಇದರಿಂದ ರೈಲ ಸಂಚಾರ ಪುನರಾರಂಭಿಸಬೇಕು. ಈ ಮೊದಲು ಹುಬ್ಬಳ್ಳಿ-ಗುಂತಕಲ್ ನಡು ನಡುವೆ ಸಂಚರಿಸುತ್ತಿದ್ದ ರೈಲು ಕಳೆದ ಒಂದು ತಿಂಗಳಿAದ ಯಾವುದೇ ಕಾರಣ ನೀಡದೆ ತೋರಣಗಲ್‌ವರೆಗೆ ಮಾತ್ರ ಸಂಚರಿಸುತ್ತಿದೆ. ಪ್ರತಿನಿತ್ಯ ಬಳ್ಳಾರಿಗೆ ಹೋಗಿ ಬರುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಹಾಗೂ ಹುಬ್ಬಳ್ಳಿ-ವಿಜಯವಾಡ ನಡುವೆ ರಾತ್ರಿ ಸಂಚರಿಸುತ್ತಿದ್ದ ರೈಲು ಒಂದು ತಿಂಗಳಿAದ ರದ್ದಾಗಿದ್ದು ಕೂಡಲೇ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ನೈರುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಬಾಬುಲಾಲ್ ಜೈನ್, ರೈಲ್ವೆ ಸಲಹಾ ಸಮಿತಿಯ ಸದಸ್ಯ ಆದೆಪ್ಪ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net