

ಹೊಸಪೇಟೆ: ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಾರ್ಟ್‌ಮೆಂಟ್‌ನಲ್ಲಿ ಮನೆಕಳ್ಳತನದ ಆರೋಪದ ಮೇರೆಗೆ ಸೆಕ್ಯೂರಿಟಿ ಗಾರ್ಡ್‌ನನ್ನು ಬಂಧಿಸಿ 5.15 ಲಕ್ಷ ರೂ. ಮೌಲ್ಯದ 70 ಗ್ರಾಂ. ಚಿನ್ನಾಭರಣ, ರೇ-ಬ್ಯಾನ್ ಕೂಲಿಂಗ್ ಗ್ಲಾಸ್ ಮತ್ತು ಸ್ಮಾರ್ಟ್ ವಾಚ್ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಕೊಪ್ಪಳದ ಬೆಟಗೇರಿ ಗ್ರಾಮದ ಪ್ರವೀಣ್ ಮಜ್ಜಿಗಿ (38) ಬಂಧಿತ ಆರೋಪಿ. ನಗರದ ಪಟೇಲ್‌ನಗರದ ಶ್ರೀಸಾಯಿಸದನ ಅಪಾರ್ಟ್‌ಮೆಂಟ್‌ನಲ್ಲಿ ಜ್ಯೋತಿ ಎಂಬವರ ಮನೆಯಲ್ಲಿ 69 ಗ್ರಾಂ. ಚಿನ್ನಾಭರಣ ಮತ್ತು ನಗದು ಸೇರಿ ಒಟ್ಟು 3ಲಕ್ಷ 95 ಸಾವಿರ ರು. ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿತ್ತು. ಇನ್ನೂ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಶರತ್‌ಕುಮಾರ ರೆಡ್ಡಿ ಎಂಬವರ ಅಪಾರ್ಟ್‌ಮೆಂಟ್‌ನಲ್ಲಿ 30 ಗ್ರಾಂ. ಚಿನ್ನಾಭರಣ ಮತ್ತು ರೇ ಬ್ಯಾನ್ ಕೂಲಿಂಗ್ ಗ್ಲಾಸ್ ಮತ್ತು ಸ್ಮಾರ್ಟ್ ವಾಚ್ ಸೇರಿ ಒಟ್ಟು 2.5 ಲಕ್ಷ ರೂ. ಮೌಲ್ಯದ ಆಭರಣ, ವಸ್ತುಗಳನ್ನು ಕಳವು ಮಾಡಲಾಗಿತ್ತು.
ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವು ಪ್ರಕರಣ ಬೇಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 18 ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್ ಮಜ್ಜಿಗಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ಪಿಐ ಲಖನ್ ಆರ್. ಮಸಗುಪ್ಪಿ ನೇತೃತ್ವದಲ್ಲಿ ಪಿಎಸ್‌ಐ ಕೆ. ರಾಜಶೇಖರ್, ಎಎಸ್‌ಐ ಬಿ.ಎಂ. ಸುರೇಶ್, ಸಿಬ್ಬಂದಿಗಳಾದ ಶ್ರೀರಾಮರೆಡ್ಡಿ, ಲಿಂಗರಾಜ್, ಎ. ಕೊಟ್ರೇಶ್, ಮಲಕಾಜ್ಜಪ್ಪ, ಜೆ. ಕೊಟ್ರೇಶ್, ಜಿ. ಶಿವಪ್ಪ, ದುರ್ಗಿಬಾಯಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
21 ಮಂಜು 03
ಹೊಸಪೇಟೆಯ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಕಳ್ಳತನದ ಆರೋಪದ ಮೇರೆಗೆ ಕಳ್ಳನನ್ನು ಬಂಧಿಸಿ 5ಲಕ್ಷ 15 ಸಾವಿರ ರು. ಮೌಲ್ಯದ 70 ಗ್ರಾಂ. ಚಿನ್ನಾಭರಣ, ರೇ-ಬ್ಯಾನ್ ಕೂಲಿಂಗ್ ಗ್ಲಾಸ್ ಮತ್ತು ಸ್ಮಾರ್ಟ್ ವಾಚ್ ವಶ ಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ಪಿಐ ಲಖನ್ ಆರ್. ಮಸಗುಪ್ಪಿ ನೇತೃತ್ವದಲ್ಲಿ ಪಿಎಸ್‌ಐ ಕೆ.ರಾಜಶೇಖರ್ ಇತರರಿದ್ದರು.
=======