ಕಾರಿಗನೂರು ಬಳಿ ಆಸ್ಪತ್ರೆ ನಿರ್ಮಾಣ ಮಾಡಿ

News
ಹೊಸಪೇಟೆ ಕಾರಿಗನೂರು ಪ್ರದೇಶದದಲ್ಲಿ 30 ಬೆಡ್ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ರೈತ ಸಂಘಟನೆ ಬುಧವಾರ ಡಿಎಚ್ಒ ಶಂಕರ್ ನಾಯ್ಕ ಜತೆ ಚರ್ಚಿಸಿದರು.
Published on

ಹೊಸಪೇಟೆ: ಕಾರಿಗನೂರು ಪ್ರದೇಶದ ಬಳಿ 30 ಬೆಡ್ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಡಿಎಚ್ಒ ಶಂಕರ್ ನಾಯ್ಕಗೆ ಮನವಿ ಸಲ್ಲಿಸಿದರು.

ನಗರದ 23ನೇ ವಾರ್ಡ್, ಕಾರಿಗನೂರು ಭಾಗದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಇಂಗಳಗಿ, ಶಂಕರನಗರ ಕ್ಯಾಂಪ್, ಸಂಕ್ಲಾಪುರ, ವಡ್ಡರಹಳ್ಳಿ, ವಿನಾಯಕ ನಗರಗಳನ್ನು ಸೇರಿದಂತೆ ಇತರೆ ಪ್ರದೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಇವರೆಲ್ಲರೂ ಕೂಲಿ ಕಾರ್ಮಿಕರೇ ಆಗಿದ್ದು ತಮ್ಮ ದಿನ ನಿತ್ಯದ ಗಣಿ ಧೂಳಿನಲ್ಲಿಯೇ ಬದಕು ಸಾಗಿಸುತ್ತಿದ್ದಾರೆ. ಬಹಳಷ್ಟು ಜನರಿಗೆ ಆಸ್ತಮಾ. ಕಿಡ್ನಿ, ಹೃದಯ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆಗೆ ಬರಬೇಕಾದ ಅನಿವಾರ್ಯತೆಯಿದೆ. ಸಕಾಲಕ್ಕೆ ಸರಿಯಾದ ಸಾರಿಗೆ ವ್ಯವಸ್ತೆ ಸಿಗದದೇ ಇರುವುದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಭಾಗದಲ್ಲಿ 30 ಬೆಡ್‌ನ ಆಸ್ಪತ್ರೆ ನಿರ್ಮಾಣವಾದರೆ ಬಡವರಿಗೆ, ಶ್ರಮಿಕರಿಗೆ, ಕೂಲಿ ಕಾರ್ಮಿಕರಿಗೆ ಉಪಯೋಗವಾಗಲಿದೆ ಎಂದು ಒತ್ತಾಯಿಸಿದರು.

ಪ್ರಮುಖರಾದ ಗಂಟೆ ಸೋಮಶೇಖರ್, ಪಿ.ವೆಂಕಟೇಶ, ಗುಜ್ಜಲ ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net