

ಹೊಸಪೇಟೆ: ಸಂಡೂರು ಉಪಚುನಾವಣೆಯಲ್ಲಿ ಗೆಲವು ಕಂಡ ನಂತರ ಮೊದಲ ಬಾರಿಗೆ ತವರು ಮನೆ ಕಮಲಾಪುರಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರಿಗೆ ಅದ್ದೂರಿ ಸ್ವಾಗತಿಸಲಾಯಿತು.
ಮೊದಲು ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಕಮಲಾಪುರಿಗೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಸಹಿ ಹಂಚಿ ಸ್ವಾಗತಿಸಿದರು. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ನಡೆಯಿತು. ಪಾಠ ಹೇಳಿಕೊಟ್ಟ ಶಿಕ್ಷಕ ದಿ.ಕಾಳೇಶ್ವರ ರಾವ್ ಅವರ ಮನೆಗೆ ಭೇಟಿ ನೀಡಿದರು. ನಂತರ ಊರಮ್ಮ ದೇವಿ ದರ್ಶನ ಪಡೆದರು. ಪಟ್ಟಣ ಹಿರಿಯರಿಂದ ಅರಿಶಿಣ ಕುಂಕುಮ ನೀಡಿ ಗೌರವಿಸಲಾಯಿತು. ನಂತರ ಕೃಷ್ಣದೇವರಾಯ ವೃತ್ತ, ಗೋನಾಳ್‌ಕೆರಿ, ವಾಲ್ಮೀಕಿ ವೃತ್ತ, ಹಿರೆಕೆರಿ, ಮನ್ಮಥಕೆರಿ ಮಾರ್ಗವಾಗಿ ಚೌಡಿಕೆರಿಯ ತವರ ಮನೆ ವರೆಗೆ ಕರೆತರಲಾಯಿತು.