

ಹೊಸಪೇಟೆ: ನಗರದ ಜಿಲ್ಲಾ ಶಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಗೃಹರಕ್ಷಕರ ಜಿಲ್ಲಾ ಮಟ್ಟದ ವಾರ್ಷಿಕ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಸಮಾಧೇಷ್ಟ ಬಸವರಾಜ್ ಅಗಸರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಿಂದ ದೈಹಿಕ ಶಕ್ತಿ ಮನೋಜ್ಙಾನ ಉತ್ತಮ ಆರೋಗ್ಯ ಸಿಗಲಿದೆ. ಹಾಗೂ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಆಡಬೇಕು ಎಂದರು.
ಜಿಲ್ಲಾ ಬೋಧಕ ಪ್ರಶಾಂತ್ ಪಾಟೀಲ್, ಘಟಕಾಧಿಕಾರಿಗಳಾದ ಎಸ್.ಎಂ.ಗಿರೀಶ್, ಎಲ್.ವಾಲ್ಯ ನಾಯ್ಕ, ಕೆ.ರಾಜಪೀರ್, ಜೆ.ಎಂ.ಭಾಷಾ, ಅನ್ವರ್ ಬಾಷಾ, ಗುರುಬಸವರಾಜ್, ಪಿ.ಎಲ್.ಸಿ. ಪರಶುರಾಮ್, ದೈಹಿಕ ಶಿಕ್ಷಕ ಜಿ.ಗೋಪಿ ಇತರರಿದ್ದರು.