

ಹೊಸಪೇಟೆ: ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಕನ್ನಡ ವಿವಿಯಲ್ಲಿ ನ.09, 10 ಮತ್ತು 11 ರಂದು 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಶಾಸನ ತಜ್ಞ ಡಾ.ಆರ್.ಶೇಷಶಾಸ್ತ್ರೀ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇತಿಹಾಸ ದರ್ಶನ ಸಂಪುಟವನ್ನು ಶಾಸಕ ಎಚ್.ಆರ್.ಗವಿಯಪ್ಪ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿಯವರು ಸದಸ್ಯರ ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಮಾತನಾಡಿ, ನ.11ರಂದು ಸಮಾರೋಪ ಸಮಾರಂಭದಲ್ಲಿ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಪಿಎಚ್‌ಡಿ ಮತ್ತು ಡಿ.ಲಿಟ್ ಪದವೀಧರ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಎರಡೂ ವೇದಿಕೆಯಲ್ಲಿ ಸಂಶೋಧನಾ ಗೋಷ್ಠಿಗಳು ಜರುಗಲಿವೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ, ಅಕಾಡೆಮಿ ಉಪಾಧ್ಯಕ್ಷ ಪ್ರೊ.ಲಕ್ಷಣ್ ತೆಲಗಾವಿ, ಪ್ರಾಧ್ಯಾಪಕರಾದ ಡಾ.ಅಮರೇಶ್ ಯತಗಲ್, ಡಾ.ಎಸ್.ವೈ.ಸೋಮಶೇಖರ್, ಡಾ.ಡಿ.ಮೀನಾಕ್ಷಿ ಇತರರಿದ್ದರು.
ಇತಿಹಾಸ ಸಂಸ್ಕೃತಿಶ್ರೀ' ಪ್ರಶಸ್ತಿಗೆ ಪ್ರೊ.ಕೆ.ಆರ್.ನರಸಿಂಹನ್ ಹಾಗೂ ಡಾ.ಹರಿಹರ ಶ್ರೀನಿವಾಸರಾವ್ ಆಯ್ಕೆಯಾಗಿದ್ದಾರೆ. ಡಾ.ಬಾ.ರಾ.ಗೋಪಾಲ್ ಶಾಸನ ದತ್ತಿ ಪ್ರಶಸ್ತಿಗೆ ವಿಜಯಪುರದ ಡಾ.ಎಸ್.ಕೆ.ಕೊಪ್ಪ ಆಯ್ಕೆ. ನೊಳಂಬಶ್ರೀ ಪ್ರಶಸ್ತಿಗೆ ಬೆಂಗಳೂರಿನ ಡಾ.ಟಿ.ವಿ.ನಾಗರಾಜ ಆಯ್ಕೆ. ಸಂಶೋಧನಶ್ರೀ ಪ್ರಶಸ್ತಿಗೆ ಬೆಂಗಳೂರು ಸಂಶೋಧಕ ಆದಪ್ಪ ಪಾಸೋಡಿ ಆಯ್ಕೆ. ನಾಯಕ ಪ್ರಶಸ್ತಿಗೆ ಮೂಡುಬಿದರೆಯ ಹಿರಿಯ ವಿದ್ವಾಂಸ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ಆಯ್ಕೆ. ಸುಮಂಗಲ ಪಾಟೀಲ ಮಹಿಳಾ ಪ್ರಶಸ್ತಿಗೆ ಬೆಂಗಳೂರು ಸಂಶೋಧಕಿ ಡಾ.ಸ್ಮಿತಾರೆಡ್ಡಿ ಆಯ್ಕೆ. ಸೂರ್ಯಕೀರ್ತಿ ಪ್ರಶಸ್ತಿಗೆ ನಾಗಮಂಗಲ ಸಂಶೋಧಕ ಮಹಮದ್ ಕಲೀಂಉಲ್ಲ ಆಯ್ಕೆ. ಡಾ.ಶ್ರೀನಿವಾಸ ಹಾವನೂರ ಸ್ಮರಣಾರ್ಥ ಪ್ರಶಸ್ತಿಗೆ ಧಾರವಾಡದ ಡಾ.ಮಹೇಶ್ ಕುಮಾರ್ ಹ.ಪಾಟೀಲ ಆಯ್ಕೆ. ಡಾ.ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ ಪ್ರಶಸ್ತಿಗೆ ಬಾಗಲಕೋಟೆಯ ಡಾ.ಯಾದಪ್ಪ ಪರದೇಶಿ ಆಯ್ಕೆ. À್ತ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಚಿತ್ರದುರ್ಗದ ಡಾ.ಸಿ.ಎಂ.ತಿಪ್ಪೇಸ್ವಾಮಿರವರ ರಕ್ಕಸದಂಗಡಿ ಕದನ ಗ್ರಂಥವನ್ನು ಆಯ್ಕೆ. ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್ಗೆ ತುಮಕೂರು ಹಿರಿಯ ವಿಜ್ಞಾನಿ ಬಿ.ಎಸ್.ಸೋಮಶೇಖರ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.