

ಹೊಸಪೇಟೆ: ಇತಿಹಾಸ ಎನ್ನುವುದು ಜಿಜ್ಞಾಸೆ, ಶಿಸ್ತು, ಬ್ರಿಟಿಷರ ಆಗಮನದ ನಂತರ ಇತಿಹಾಸ ಒಂದು ಜ್ಞಾನಶಿಸ್ತಾಗಿ ಬೆಳೆಯಿತು. ಅದಕ್ಕು ಮೊದಲು ಇತಿಹಾಸ ಸಂಕಥನ ಮೌಖಿಕವಾಗಿತ್ತು. ಗತಕಾಲದ ಎಲ್ಲ ಸಂಗತಿಗಳು ಇತಿಹಾಸ ಆಗುವುದಿಲ್ಲ ಎಂದು ಕನ್ನಡ ವಿವಿಯ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಹೇಳಿದರು.
ಕನ್ನಡ ವಿವಿಯಲ್ಲಿ ಮಂಟಪ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಇತಿಹಾಸ ಅಕಾದೆಮಿಯ 38ನೇ ವಾರ್ಷಿಕ ರಾಷ್ಟಿçÃಯ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಪಿಎಚ್.ಡಿ. ಮತ್ತು ಡಿ.ಲಿಟ್ ಪದವೀಧರ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಬ್ರಿಟಿಷರಿಗೆ ಅಧಿಕಾರ ನಡೆಸಲು ನಮ್ಮ ಇತಿಹಾಸ ಬೇಕಾಗಿತ್ತು. ಆದರೆ ನಮ್ಮವರೇ ಆಕರಗಳನ್ನು ಹುಡುಕಿಕೊಂಡು ಶಾಸನಗಳ ಮೂಲಕ ಇತಿಹಾಸವನ್ನು ಮರುರಚಿಸುವ ಕೆಲಸ ಆರಂಭಿಸಿದರು. ಭಾರತೀಯ ಇತಿಹಾಸ ಬರೆಯಲು ಮೊದಲು ಯೂರೋಪಿಯನ್ ಇತಿಹಾಸ ರಚನೆ ನಮಗೆ ಮಾದರಿಯಾಗಿತ್ತು. ಇತಿಹಾಸ ಅಕಾಡೆಮಿಯು ಸ್ಥಳೀಯ ಚರಿತ್ರೆಯ ರಚನೆಗೆ ಮಹತ್ವ ನೀಡುತ್ತಿದೆ ಎಂದರು.
ನಗರದ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಬಗ್ಗೆ ನಡೆದಷ್ಟು ಸಂಶೋಧನೆಗಳು ಪ್ರೌಢದೇವರಾಯನ ಬಗ್ಗೆ ನಡೆಯುತ್ತಿಲ್ಲ. ಇತಿಹಾಸ ಮುಚ್ಚಿಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ನೈಜ ಇತಿಹಾಸ ಬೆಳಕಿಗೆ ಬರಬೇಕು. ಇತಿಹಾಸ ಚಲನಶೀಲವಾಗಿರಬೇಕು ಎಂದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಮನೆ, ಮಠ, ಸಾಮಾಜಿಕ ಸಂಘಸAಸ್ಥೆಗಳು, ಇತಿಹಾಸ ಅಕಾಡೆಮಿಗೆ ಆಶ್ರಯ ನೀಡುತ್ತಲೆ ಬಂದಿವೆ. ಸರ್ಕಾರವು ನೆರವು ನೀಡಿದೆ. ಮುಂದಿನ ಇತಿಹಾಸ ಸಮ್ಮೇಳನ ಗದಗದಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ.ಆರ್.ಶೇಷಶಾಸ್ತಿç, ಕಾರ್ಯಕಾರಿ ಸಮಿತಿ ಸದಸ್ಯ ಡಾ.ಕೆ.ರವೀಂದ್ರನಾಥ, ಕಾರ್ಯದರ್ಶಿ ಡಾ.ವಿ.ಸಂಧ್ಯಾ, ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ ಇತರರಿದ್ದರು.