ಐತಿಹಾಸಿಕ ಹಂಪಿಯಲ್ಲಿ ಸ್ವದೇಶಿ-ವಿದೇಶಿಗರ ಹೋಳಿ ಸಂಭ್ರಮ

190322 Hampi Holi 2022
ಹಂಪಿಯಲ್ಲಿ ವಿದೇಶಗರೊಂದಿಗೆ ಸ್ವದೇಶಿಗರು ಶನಿವಾರ ಹೋಳಿ ಎರಚಿ ಸಂಭ್ರಮಿಸಿದರು.
Published on

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಶನಿವಾರ ಹೋಳಿ ಹಬ್ಬದಿಂದ ಆಚರಿಸಲಾಯಿತು. ಕರೊನಾಂತಕದಿಂದ ಎರಡು ವರ್ಷಗಳಿಂದ ಕಳೆಗುಂದಿದ್ದ ಹೋಳಿ ಹಬ್ಬದ ಸಂಭ್ರಮ ಈ ಬಾರಿ ಮತ್ತೆ ಮರುಕಳಿಸಿದ್ದು, ವಿದೇಶಿಗರ ಜತೆ ಸ್ಥಳೀಯರು ಬಣ್ಣಎರಚಿ ಸಂತಸ ಪಟ್ಟರು.

ಸ್ಥಳೀಯರೊಂದಿಗೆ ವಿದೇಶಿಗರು ಪ್ರತಿ ವರ್ಷ ಬಣ್ಣದೊಕುಳಿ ಆಡುವುದು ಇಲ್ಲಿ ಸಾಮಾನ್ಯ. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ವಿದೇಶಿಗರಿದ್ದರೂ ಅಕ್ಕಪಕ್ಕದ ರಾಜ್ಯದ ಪ್ರವಾಸಿಗರಲ್ಲದೆ ಸ್ಥಳೀಯರಿಂದ ರಂಗಿನಾಟ ಮೆರುಗು ಪಡೆದಿತ್ತು. ಮೆರವಣಿಗೆಯಲ್ಲಿ ಪರಸ್ಪರ ಬಣ್ಣ ಎರಚಿ, ಹೋಳಿ ರಂಗಿನಲ್ಲಿ ಭಾಗಿಯಾದರು. ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿ ಹಾಗೂ ಗ್ರಾಮದ ಗಲ್ಲಿಗಳಲ್ಲಿ ಯುವಜನತೆ ಪರಸ್ಪರ ಬಣ್ಣ ಎರಚಾಡಿದರು. ನಂತರ ಹಲವು ಯುವಕ- ಯುವತಿಯರು ಕುಣಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net