ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಲಿ

news
ಹೊಸಪೇಟೆಯಲ್ಲಿ ಶನಿವಾರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ, ಹಿಂದೂ ಜಾಗೃತಿ ಸಮಿತಿ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
Published on

ಹೊಸಪೇಟೆ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಯನ್ನು ಖಂಡಿಸಿ, ಹಿಂದೂ ಜಾಗೃತಿ ಸಮಿತಿವತಿಯಿಂದ ನಗರದಲ್ಲಿ ಶನಿವಾರ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಯಿತು.

ನಗರದ ವಡಕರಾಯ ದೇವಸ್ಥಾನದಿಂದ ಪುನೀತ್ ರಾಜಕುಮಾರ್ ವರೆಗೆ ಮೆರವಣಿಗೆ ನಡೆಯಿತು. ವಿವಿಧ ಸಮುದಾಯಗಳ ಮುಖಂಡರು, ಯುವಕರು ಅಂಗಡಿ ಮುಂಗಟ್ಟುಗಳನ್ಮು ಬಂದ್ ಮಾಡಿ ಪ್ರಯಿಭಟನೆಯಲ್ಲಿ ಭಾಗವಹಿಸಿದರು.

ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಅರಾಜಕತೆ ಸೃಷ್ಟಿಯಾಗಿದ್ದು, ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಸಾಕಷ್ಟು ರೀತಿಯಲ್ಲಿ ದೌರ್ಜನ್ಯ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ. ಬಾಂಗ್ಲಾ ದೇಶದಲ್ಲಿರುವ ಮುಸ್ಲಿಂರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹಿಂದೂಗಳ ಮನೆಗಳು ಮತ್ತು ದೇವಾಲಯಗಳನ್ನು ನಾಶಗೊಳಿಸಲು ಮುಂದಾಗಿದ್ದಾರೆ. ಈ ನಡುವೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವAತೆ ಹಿಂದೂಗಳನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೇ ದೇಶಬಿಟ್ಟು ತೊಲಗಿ ಎಂದು ಹಿಂಸೆ ನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.

ಬಾಂಗ್ಲಾ ದೇಶದಲ್ಲಿ ನಡೆದಿರುವ ಹಿಂದೂಗಳ ಮೇಲೆನ ದೌರ್ಜನ್ಯವನ್ನು ನಮ್ಮ ದೇಶದ ಹಲವಾರು ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡು ಖುಷಿಪಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಹಿಂದೂಗಳ ಹಾಗೂ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯಲು ಭಾರತ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು. ಇದು ಈಗೇಯೇ ಮುಂದುವರಿದರೇ ದೇಶದಲ್ಲಿರುವ ಹಿಂದೂಗಳು ಒಂದಾಗಿ, ಬಾಂಗ್ಲಾ ದೇಶದ ಹಿಂದೂಗಳ ಪರವಾಗಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹುಡಾ ಮಾಜಿ ಅಧ್ಯಕ್ಚ ಅಶೋಕ ಜೀರೆ, ಪ್ರಮುಖರಾದ ಪ್ರಮೋದ್ ಜೈನ್ , ಶ್ರೀಕಾಂತ ಪೂಜಾರ, ಜಗದೀಶ್ ಕುಮಟಗಿ, ವೀರಣ್ಣ, ಪ್ರವೀಣ್, ಕಿಚಡಿ ಕೊಟ್ರೇಶ, ಸೂರಿ ಬಂಗಾರ, ರೇವಣಸಿದ್ಧಪ್ಪ, ಕಿರಣ್, ರಮೇಶ ಗುಪ್ತಾ, ಮದುರಚೆನ್ನಶಾಸ್ತ್ರಿ ಪ್ರಮೋದ ಜೈನ್, ಭೂಪಾಳ ಶ್ರೀ ಪಾದ, ಶ್ರೀಕಾಂತ, ನರಸಿಂಹಮೂರ್ತಿ, ಕೇಶವ್, ಪಾಂಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net