

ಹೊಸಪೇಟೆ: ಜಮ್ಮು ಕಾಶ್ಮೀರದದಲ್ಲಿ ಹಿಂದೂಗಳ ಹತ್ಯಾಕಾಂಡ ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತ್ರತ್ವದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳದ, ಹಿಂದೂ ಜಾಗರಣಾ ವೇದಿಕೆ, ವೀರಶೈವ ಸಮಾಜ, ಬ್ರಾಹ್ಮಣ ಸಮಾಜ ಸೇರಿದಂತೆ ಹಿಂದೂಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಮ್ಮು- ಕಾಶ್ಮೀರದ ಸುಂದರ ಪ್ರವಾಸಿ ತಾಣ ಪಹಲ್ಲಾವ್‌ನಲ್ಲಿ ಪಾಕಿಸ್ತಾನ ಪೋಷಿತ ಉಗ್ರರು ಹಿಂದೂಗಳನ್ನೆ ಗುರಿಯಾಗಿರಿಸಿ ಗುಂಡುಹಾರಿಸಿ ಹತ್ಯೆ ಮಡಿರುವುದು ಖಂಡನೀಯ. ಇಂತಹ ಕೃತ್ಯವನ್ನು ಸಹಿಸುವುದಿಲ್ಲ. ಈಗಾಗಲೆ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಪೆಟ್ಟು ನೀಡಿದ್ದು ಸ್ವಾಗತಾರ್ಹ. ಆದರೆ ದುಷ್ಟ ಉಗ್ರರನ್ನು ಶಿಕ್ಷಿಸುವುದು ಅತಿಅವಶ್ಯವಿದೆ. ಉಗ್ರರಿಗೆ ತಕ್ಕಶಿಕ್ಷೆ ನೀಡದಿದ್ದಲ್ಲಿ ಮತ್ತೆ ಈ ತರಹದ ಘಟನೆಗಳು ಸಂಭವಿಸಲಿವೆ ಎಂದು ಆಗ್ರಹಿಸಿದರು.
ವಕ್ಸ್ ಕಾಯಿದೆ ವಿರೋದಿಸಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆ, ಹಲೈ, ದೌರ್ಜನ್ಯವನ್ನು ತಡೆಯಬೇಕು, ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕು. ಮತ್ತು ಹಿಂದೂಗಳ ಮಠ, ಮಂದಿರ, ಆಸ್ತಿಗಳನ್ನು ರಕ್ಷಿಸಬೇಕು. ಮುಂದಿನ ದಿನಗಳಲ್ಲಿ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಅನದೀಕೃತ ಕಸಾಯಿಕಾನೆಗಳು ಕಾರ್ಯನಿರ್ವಹಿಸುತ್ತಿವೆ. ಗೋವುಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಮತ್ತು ಗೋಮಾಂಸದ ಕಾದ್ಯ (ನಂ.10) ಬಿರಿಯಾನಿ ದೊರೆಯುತ್ತದೆ ಎಂದು ನಾಮಫಲಕವಿಟ್ಟು ರಾಜಾರೋಷವಾಗಿ ಅನಧಿಕೃತ ವ್ಯಾಪಾರ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಕಾನೂನು ಬಾಹಿರವಾಗಿ ನಡೆಯುವ ಚಟುವಟಿಕೆಗೆ ತಡೆನೀಡಬೇಕು ಎಂದು ಮನವಿ ಮಾಡಿದರು.