ಹಿಂದು ವಿರೋಧಿ ಸರ್ಕಾರ ತೊಲಗಲಿ

10 MANJU 07
Published on

ಹೊಸಪೇಟೆ: ಮದ್ದೂರಿನಲ್ಲಿ ಗಣಪತಿ ವಿಸರ್ಜನೆಯಲ್ಲಿ ಮಂತಾದರ ತಂದ ವಿಘ್ನವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಮಾಡಿರುವ ಅಮಾನುಷ ಲಾಠಿ ಚಾರ್ಜ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪತ್ರಿಕಾಪ್ರಕಟಣೆ ಹೇಳಿಕೆ ನೀಡಿರುವ ಅವರು, ಗಣೇಶ ವಿಸರ್ಜನೆ ಸಮಯದಲ್ಲಿ ಯಾರು ಕಲ್ಲೆಸೆದರು ಎಂದು ತನಿಖೆ ನಡೆಯಲಿ. ಹಿಂದು ಧಾರ್ಮಿಕ ಭಾವನೆಗೆ ದಕ್ಕೆಯಾಗದಂತೆ ತಡೆಯುವದನ್ನು ಬಿಟ್ಟು ಕಲ್ಲೆಸೆದವರ ರಕ್ಷಣೆಗೆ ಸರ್ಕಾರ ನಿಂತಿದೆ. ಇದೆನ್ನು ನೋಡಿದರೆ, ಪೋಲಿಸ್ ರಾಜ್ಯವೆ? ಅಥವಾ ಪ್ರಜಾಪ್ರಭುತ್ವ ರಾಜ್ಯವೆ ಸಂಶಯವಾಗಿದೆ. ಕಲ್ಲು ಹೊಡೆದುದನ್ನು ಪ್ರಶ್ನೆ ಮಾಡಿದ ಬಾಲಕಿಯ ಮೇಲೆ ಪೋಲಿಸ್ ಪೇದೆ ಲಾಠಿ ಚಾರ್ಜ್ ಮಾಡಿದ್ದು ಅಕ್ಷ್ಯಮ್ಯ ಅಪರಾಧವಾಗಿದೆ. ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುವದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

ಈ ಸರ್ಕಾರ ಪೊಲೀಸರ ಕೈಯನ್ನು ಕಟ್ಟಿ ಹಾಕುತ್ತಿದೆ. ಪೊಲೀಸರಿಗೆ ಸರಿಯಾಗಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ. ಸ್ವತಂತ್ರವಾಗಿ ತನಿಖೆ ಮಾಡಲು ಬಿಡುತ್ತಿಲ್ಲ. ಪೊಲೀಸ್ ಮ್ಯಾನುವಲ್ ಮೂಲಕ ಬಂದೋಬಸ್ತ್ ಕರ್ತವ್ಯದ ಯೋಜನೆ ಆಗುತ್ತಿಲ್ಲ. ತುಷ್ಟೀಕರಣದ ಪರಾಕಾಷ್ಠೆಗೆ ಹೋಗಿ, ಹಿಂದು ಭಾವನೆಗಳನ್ನು ಕೆದಕುವ ದುಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿದೆ. ಅದರ ಪರಿಣಾಮವಾಗಿ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದಿದೆ. ಇದು ಹಿಂದು ವಿರೋದಿ, ಕಾನೂನು ಸುವ್ಯವಸ್ಥೆ ಕುಸಿದು ಹೋಗಿರುವ ಸರ್ಕಾರ ಇದೆಆಗಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net