ಗಿಡಮೂಲಿಕೆಗಳ ಮಹತ್ವ ಅರಿಯಿರಿ

news
ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಜಟಿ ಬೂಟಿ ದಿವಸ್ ಕಾರ್ಯಕ್ರಮದಲ್ಲಿ ಔಷಧೀಯ ಗಿಡಗಳನ್ನು ಪ್ರದರ್ಶಿಸಿದರು.
Published on

ಹೊಸಪೇಟೆ: ಗಿಡಮೂಲಿಕೆ ಸಸ್ಯಗಳ ಮಹತ್ವ ನಾವು ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಬಳಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಪ್ರೊ.ಎಫ್.ಟಿ.ಹಳ್ಳಿಕೇರಿ ಹೇಳಿದರು.

ಪತಂಜಲಿ ಯೋಗ ಸಮಿತಿಯಿಂದ ನಗರದ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಜಟಿ ಬೂಟಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತಂಜಲಿ ಸಂಸ್ಥೆಯ ವತಿಯಿಂದ ಯೋಗ ಮತ್ತು ಆಯುರ್ವೇದದಲ್ಲಿ ಸಹ ಸಾಕಷ್ಟು ಅಧ್ಯಯನ, ಸಂಶೋಧನೆ ನಡೆದಿದೆ. ಇದೆರ ರೂವಾರಿ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ. ಪ್ರತಿಯೊಬ್ಬರೂ ಯೋಗ, ಗಿಡಮೂಲಿಕೆಗಳ ಮಹತ್ವ ತಿಳಿಯುವ ಮೂಲಕ ಈ ಸಾಧಕರ ಕೊಡುಗೆಯನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದರು.

ಭಾರತ ಸ್ವಾಭಿಮಾನ್ ಟ್ರಸ್ಟ್ನ ಪ್ರಭಾರಿ ಬಾಲಚಂದ್ರ ಶರ್ಮಾ ಮಾತನಾಡಿ, 60 ಸಾವಿರಕ್ಕೂ ಅಧಿಕ ಗಿಡಮೂಲಿಕೆಗ ಕುರಿತಂತೆ ಆಚಾರ್ಯ ಬಾಲಕೃಷ್ಣ ಅವರು ವಿಶ್ವಕೋಶ ಸಿದ್ಧಪಡಿಸಿದರು. ಅದರ 150 ಸಂಪುಟಗಳು ಪ್ರಕಟವಾಗಿವೆ. ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲೆಡೆಯ ಗಿಡಮೂಲಿಕೆಗ ಕುರಿತ ಮಾಹಿತಿ ಅದರಲ್ಲಿದೆ. ರಾಸಾಯನಿಕ ಮುಕ್ತ ಆಹಾರ, ಔಷಧ ಬಳಕೆಗಾಗಿ ಅವರು ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಪತAಜಲಿ ಕಿಸಾನ್ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ಕೃಷ್ಣ ನಾಯಕ್, ಪ್ರಮುಖರಾದ ಕಿರಣ್ ಕುಮಾರ್, ಮಂಗಳಮ್ಮ, ಅನಂತ ಜೋಷಿ, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net