ಹೆಲ್ಮೆಟ್ ನಿಯಮ ಸಡಿಲಗೊಳಿಸಿ

05 MANJU 03
Published on

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೆಲ್ಮೆಟ್ ನಿಯಮ ಸಡಿಲಗೊಳಿಸುವಂತೆ ಒತ್ತಾಯಿಸಿ ಡಿವೈಎಫ್‌ಐ ಸಂಘಟನೆಯಿಂದ ನಗರದಲ್ಲಿ ಎಸ್ಪಿ ಅರುಣಾಂಗ್ಷುಗಿರಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ವಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ ಮಾತನಾಡಿ, ಹೆಲ್ಮೆಟ್ ಕಡ್ಡಾಯ ಮಾಡಲು ಮುಂದಾಗಿರುವ ಪೊಲೀಸರ ಕ್ರಮ ಸ್ವಾಗತಾರ್ಹ. ಆದರೆ, ನಗರದಲ್ಲಿ ವಾಹನಗಳು ತಿರುಗಾಡುವ ರಸ್ತೆ 6 ಕಿ.ಮೀ.ಗಿಂತ ಕಡಿಮೆ ಇದೆ. ಇಲ್ಲಿ 20 ಕಿ.ಮೀ.ವೇಗ ಮಿತಿಯಲ್ಲೇ ವಾಹನ ಚಲಾಯಿಸಬೇಕಾಗುತ್ತದೆ. ವಿಪರೀತ ಬಿಸಿಲಿನ ಝಳದಿಂದಲೂ ಕಷ್ಟ ಎದುರಾಗುತ್ತಿದೆ. ನಗರದಲ್ಲಿ  ಕಟ್ಟಡ, ಕೂಲಿ, ಕಾರ್ಮಿಕರು ಹಾಗೂ ರೈತರು ಹೆಚ್ಚಾಗಿ ಗದ್ದೆಗಳಿಗೆ ದ್ವಿಚಕ್ರ ವಾಹನದಲ್ಲಿ ತೆರಳಬೇಕಾಗಿದೆ, ಈ ಎಲ್ಲ ಕಾರಣಗಳಿಂದ ಹೆಲ್ಮೆಟ್‌ ಧಾರಣೆ ಕಡ್ಡಾಯವನ್ನು ಇಲ್ಲಿ ಸಡಿಲಗೊಳಿಸಬೇಕು. ಹೆದ್ದಾರಿಗಳಲ್ಲಿ ಹೆಲ್ಮೆಟ್‌ ಧರಿಸಿಯೇ ವಾಹನ ಚಲಾಯಿಸಬೇಕು. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಸ್ನೇಹಮಯಿ ಪ್ರಚಾರ ಕೈಗೊಳ್ಳಬೇಕು ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಬಂಡೆ ತಿರುಕಪ್ಪ, ಮೊಹಮ್ಮದ್ ಖಾಲಿದ್‌ ಅಲ್ತಾಫ್‌, ಎಸ್‌.ವಿಜಯಕುಮಾರ್ ಹನುಮನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net