ಜಿಲ್ಲಾ ಘಟಕದ ಅಧ್ಯಕ್ಷ ವಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ ಮಾತನಾಡಿ, ಹೆಲ್ಮೆಟ್ ಕಡ್ಡಾಯ ಮಾಡಲು ಮುಂದಾಗಿರುವ ಪೊಲೀಸರ ಕ್ರಮ ಸ್ವಾಗತಾರ್ಹ. ಆದರೆ, ನಗರದಲ್ಲಿ ವಾಹನಗಳು ತಿರುಗಾಡುವ ರಸ್ತೆ 6 ಕಿ.ಮೀ.ಗಿಂತ ಕಡಿಮೆ ಇದೆ. ಇಲ್ಲಿ 20 ಕಿ.ಮೀ.ವೇಗ ಮಿತಿಯಲ್ಲೇ ವಾಹನ ಚಲಾಯಿಸಬೇಕಾಗುತ್ತದೆ. ವಿಪರೀತ ಬಿಸಿಲಿನ ಝಳದಿಂದಲೂ ಕಷ್ಟ ಎದುರಾಗುತ್ತಿದೆ. ನಗರದಲ್ಲಿ ಕಟ್ಟಡ, ಕೂಲಿ, ಕಾರ್ಮಿಕರು ಹಾಗೂ ರೈತರು ಹೆಚ್ಚಾಗಿ ಗದ್ದೆಗಳಿಗೆ ದ್ವಿಚಕ್ರ ವಾಹನದಲ್ಲಿ ತೆರಳಬೇಕಾಗಿದೆ, ಈ ಎಲ್ಲ ಕಾರಣಗಳಿಂದ ಹೆಲ್ಮೆಟ್ ಧಾರಣೆ ಕಡ್ಡಾಯವನ್ನು ಇಲ್ಲಿ ಸಡಿಲಗೊಳಿಸಬೇಕು. ಹೆದ್ದಾರಿಗಳಲ್ಲಿ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಸ್ನೇಹಮಯಿ ಪ್ರಚಾರ ಕೈಗೊಳ್ಳಬೇಕು ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.