

ಹೊಸಪೇಟೆ: ನಾವು ಕಡ್ಡಾಯವಾಗಿ ಪಾಲನೆ ತಪ್ಪಿದಲ್ಲಿ ಕ್ರಮಕೈಗೊಳ್ಳುವು ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆ ಮಾಡುವುದು ನಮ್ಮ ಉದ್ದೇಶ ಎಂದು ವಿಜಯನಗರ ಎಸ್ಪಿ ಎಸ್.ಜಾಹ್ನವಿ ಹೇಳಿದರು.
ಪೊಲೀಸ್ ಉಪ-ವಿಭಾಗ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ರಸ್ತೆ ಸಂಚಾರಿ ನಿಯಮ ಪಾಲನೆ ಹಾಗೂ ಹೆಲ್ಮೇಟ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ರಸ್ತೆ ನಿಯಮ ಪಾಲನೆ ಮಾಡುವುದರಿಂದ ನಮ್ಮ ಹಾಗೂ ನಮ್ಮ ಕುಟುಂಬದ ಸುರಕ್ಷತೆಯಿಂದ ಕಡ್ಡಾಯ ಪಾಲನೆ ಮಾಡುತ್ತಿದ್ದು ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದರು.
ಯಾವುದೆ ಕಾರಣಕ್ಕೂ ರಸ್ತೆ ನಿಯಮ ಉಲ್ಲಂಘಿಸಬೇಡಿ, ಹೆಲ್ಮೇಟ್ ಕಡ್ಡಾಯಧರಿಸಬೇಕು, ಮೂವರು ವಾಹನಗಳಲ್ಲಿ ಚಲಾಯಿಸುವುದು ಮತ್ತು ಅಪ್ರಾಪ್ತರಿಗೆ ವಾಹನ ಚಾಲನೆ ನೀಡುವುದು ಸಹ ಅಪರಾಧವಾಗಲಿದೆ. ಅಫಘಾತ ಹಾಗೂ ಅಪರಾಧ ತಡೆಯಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಡಿವೈಎಸ್ಪಿ ಡಾ.ಟಿ.ಮಂಜುನಾಥ ಮಾತನಾಡಿ, ಎಲ್ಲಾ ಹಂತದಲ್ಲಿ ಜಾಗೃತಿಯ ತಕ್ಷಣವೇ ಅನುಷ್ಠಾನ ಆರಂಭವಾಗಲಿದೆ. ರಸ್ತೆನಿಯಮಗಳನ್ನು ಪಾಲನೆ ಮಾಡಿ ಸಮಾಜದ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗೆ ಸಹಕಾರ ನೀಡಬೇಕು ಎಂದರು.
ಮೇನ್ ಬಜಾರ್‌ನಿಂದ ಆರಂಭವಾದ ಬೈಕ್ ರ‍್ಯಾಲಿ, ಗಾಂಧಿಚೌಕ್, ಕೇಂದ್ರ ಬಸ್‌ನಿಲ್ದಾಣ, ಕನಕ ವೃತ್ತ, ಪುನಿತ್ ರಾಜಕುಮಾರ ವೃತ್ತ, ಅಂಬೇಡ್ಕರ್ ವೃತ್ತ, ಬಸವಣ್ಣ ವೃತ್ತ, ಸಾಯಿಬಾಬಾ ವೃತ್ತ, ವಾಲ್ಮೀಕಿ ವೃತ್ತ, ಮದಕರಿ ವೃತ್ತ ಸೇರಿ ಇತರೆ ಕಡೆ ಹೆಲ್ಮೇಟ್ ಧರಿಸಿ ಜಾಗೃತಿ ಮೂಡಿಸಲಾಯಿತು.
ಡಿವೈಎಸ್‌ಪಿ ಟಿ.ಮಂಜುನಾಥ, ಪಿಐಗಳಾದ ಹುಲಗಪ್ಪ, ಲಖನ್ ಆರ್.ಮುಸುಗುಪ್ಪಿ, ರಾಜೇಶ್, ಮೊಹ್ಮದ್ ಗೌಸ್, ಸೋಮಲನಾಯ್ಕ, ಬಿ.ಎಸ್.ನಾಯ್ಡು, ರಾಜಶೇಖರ್, ಶಿವಕುಮಾರ್ ನಾಯ್ಕ, ವಿರೂಪಾಕ್ಷಪ್ಪ, ಸಂತೋಷ್ ಇತರರಿದ್ದರು.