ಹೃದಯ ಚಿಕಿತ್ಸಾ ಘಟಕ ಅನುಮೋದನೆ

HOSAPETE
H R GAVIYAPPA
Published on
ಹೊಸಪೇಟೆ: ಬೆಂಗಳೂರಿನಲ್ಲಿ ಶುಕ್ರವಾರ ನಡದ ಸಚಿವ ಸಂಪುಟ ಸಭೆಯಲ್ಲಿ 20 ಹಾಸಿಗೆಯ ಹೃದಯ ಚಿಕಿತ್ಸಾ ಘಟಕ ಅನುಮೋದನೆ ಹಾಗೂ 10 ಕೋಟಿ ರೂ. ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಹೃದಯ ಚಿಕಿತ್ಸಾ ಘಟಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹಾಗೂ ನೆರೆ  ಜಿಲ್ಲೆಗಳಾದ ಬಳ್ಳಾರಿ, ಹಾಗೂ ಕೊಪ್ಪಳ ಜಿಲ್ಲೆಯ ಹೃದಯರೋಗಿಗಳಿಗೆ ಅನುಕೂಲ ಆಗಲಿದೆ‌. ಆದ್ದರಿಂದ ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ 250 ಬೆಡ್ ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯರೋಗ ವಿಭಾಗವನ್ನು ತೆರೆಯಲು ಅನುಮೋದನೆ ಸಿಕ್ಕಿದೆ. ಹಲವು ವರ್ಷಗಳ ಬೇಡಿಕೆ ಹಾಗೂ ನಾನು ಕಳೆದ ಎರಡು ವರ್ಷಗಳಿಂದ ನಡೆಸಿದ ಸತತ ಪ್ರಯತ್ನದಿಂದಾಗಿ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net