ಹೊಸಪೇಟೆ: ಕರ್ನಾಟಕ ಮೆದುಳು ಉಪಕ್ರಮ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮಂಜೂರಾಗಿರುವ ನ್ಯೂರೋಲೋಜಿಸ್ಟ್, ಎಂಡಿ ಫಿಜೀಷಿಯನ್, ಎಂಬಿಬಿಎಸ್, ನರ್ಸ್, ಫಿಜಿಯೋಥೆರಿಪಿಸ್ಟ್, ಸ್ಪೀಚ್ ಥೇರಪಿಸ್ಟ್ (ಸ್ಪೀಚ್ಚ್ ಮತ್ತು ಲಾಂಗ್‌ವೇಜ್ ಫಥೋಲಾಜಿಸ್ಟ್) ಮತ್ತು ಜಿಲ್ಲಾ ಸಂಯೋಜಕರ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಇದಕ್ಕೆ ಸಂಬAಧಿಸಿದAತೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಆ.12 ರಂದು, ಸಂಜೆ 5 ಗಂಟೆಯೊಳಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಲು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ರಾಧಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.