

ಹೊಸಪೇಟೆ: ಹೆಣ್ಣು ಮಗುವನ್ನು ತಾರತಮ್ಯ, ಬೇಧಭಾವ ಪೋಷಕರು ಮತ್ತು ಸಮಾಜದಲ್ಲಿ ಇರಬಾರದು. ಹೆಣ್ಣು ಮತ್ತು ಗಂಡು ಸಮಾನರು ಹಾಗೂ ಯಾವುದೇ ಎಲ್ಲ ಸಮಾನ ಅವಕಾಶಗಳನ್ನು ಸಿಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆಯಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.
ಲಿಂಗ ತಾರತಮ್ಯ ಕೊನೆಯಾಗಬೇಕು. ಹೆಣ್ಣು ಮಗುವಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯಗಳು ಸಿಗಬೇಕು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹಾಗೂ ಹೆಣ್ಣು ಮಗಳು ಎಂಬ ಕೀಳರಮೆ ಕೊನೆಯಾಗಬೇಕು ಎಂದರು.
ಸರ್ಕಾರ ಹೆಣ್ಣು ಮಕ್ಕಳ ಬಲವರ್ಧನೆ ಮತ್ತು ಸ್ವಾವಲಂಬನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಸಹ ಇವತ್ತಿಗೂ ಹೆಣ್ಣು ಎಂದರೆ ಮೂಗು ಮುರಿಯುವ ಧೋರಣೆ ಇದೆ. ಇದು ಕೊನೆಯಾಗಿ ಉತ್ತಮ ಆರೋಗ್ಯ, ಶಿಕ್ಷಣ, ಗೌವಯುತ ಜೀವನ ನಡೆಸಲು ಅವಕಾಶ ಮತ್ತು ಶಾಲೆಯಲ್ಲಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಭದ್ರತೆ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ವಾಗಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಹರಿಪ್ರಸಾದ್, ವೈದ್ಯರಾದ ಡಾ.ನೂರ್ ಭಾಷಾ, ಡಾ.ಸಿಂಧುಶಾ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ, ಶುಷ್ರೂಷಣಾಧಿಕಾರಿ ವೀಣಾ, ರವಿಶಂಕರ್, ಶರಣಯ್ಯಸ್ವಾಮಿ ಇತರರಿದ್ದರು.